ಇಬ್ಬರು ತಾಲಿಬಾನ್ ಉಗ್ರರ ಹತ್ಯೆ..!!

(ನ್ಯೂಸ್ ಕಡಬ) newskadaba.com ಕರಾಚಿ, ಮಾ. 15. ಕಳೆದ ತಿಂಗಳು ಕರಾಚಿ ಪೊಲೀಸ್ ಮುಖ್ಯಸ್ಥರ ಕಚೇರಿ ಮೇಲೆ ನಡೆದ ದಾಳಿಯನ್ನು ಸಂಘಟಿಸಿದ ಪಾಕಿಸ್ತಾನಿ ತಾಲಿಬಾನ್ ಉಗ್ರ ಸಂಘಟನೆಯ ಇಬ್ಬರು ಪ್ರಮುಖ ಸೂತ್ರಧಾರಿಗಳನ್ನು ಭಯೋತ್ಪಾದನಾ ನಿಗ್ರಹ ದಳದ ಸಿಬ್ಬಂದಿ (ಸಿಟಿಡಿ) ಹತ್ಯೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.


‘ಟಿಟಿಪಿ ಉಗ್ರರು ಕರಾಚಿಗೆ ಬರುವ ಕುರಿತು ಸಿಟಿಡಿ ಸಿಬ್ಬಂದಿಗೆ ಭಾನುವಾರ ರಾತ್ರಿ ಮಾಹಿತಿ ದೊರಕಿತ್ತು. ಸೋಮವಾರ ಬೆಳಿಗ್ಗೆ ಎರಡು ಬೈಕ್ಗಳಲ್ಲಿ ಉಗ್ರರು ಕರಾಚಿಗೆ ಬಂದಿದ್ದರು. ಈ ವೇಳೆ ಸಿಟಿಡಿ ಸಿಬ್ಬಂದಿ ಉಗ್ರರಿಗೆ ನಿಲ್ಲುವಂತೆ ಸೂಚಿಸಿದರು.

Scroll to Top