ಮಾಲ್ನಲ್ಲಿ ಚಿನ್ನದ ಬಳೆ ಕದ್ದು ಸಿಕ್ಕಿಬಿದ್ದ ಸಾಫ್ಟ್ವೇರ್ ಎಂಜಿನಿಯರ್..!

(ನ್ಯೂಸ್ ಕಡಬ)newskadaba.com ಪುಣೆ, ಮಾ.10. ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಉನ್ನತ ಐಟಿ ಇಂಜಿನಿಯರ್ ಚಿನ್ನದ ಬಳೆಯನ್ನು ಕದ್ದ ಆರೋಪ ಎದುರಿಸುತ್ತಿದ್ದಾನೆ ! ಮಾರ್ಚ್ 5 ರಂದು ಪುಣೆಯ ಫೋನಿಕ್ಸ್ ಮಾಲ್ನಲ್ಲಿ ಚಿನ್ನದ ಬಳೆಯನ್ನು ಕದ್ದ ಆರೋಪ ಈತನ ಮೇಲಿದ್ದು, ಇವನನ್ನು ಬಂಧಿಸಲಾಗಿದೆ.


ಫೋನಿಕ್ಸ್ ಮಾಲ್ನಲ್ಲಿರುವ ಬ್ಲೂ ಸ್ಟೋನ್ ಶಾಪ್ನಿಂದ ಚಿನ್ನದ ಬಳೆ ಕದಿಯುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಾಲ್ನಿಂದ ಸಿಸಿ ಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಟೆಕ್ಕಿಯನ್ನು ಬಂಧಿಸಿದ್ದಾರೆ.

error: Content is protected !!
Scroll to Top