ಬಸ್‌ ಮತ್ತು ಟ್ರಕ್‌ ನಡುವೆ ಅಪಘಾತ ➤  20 ಮಂದಿ ಮೃತ್ಯು.!

(ನ್ಯೂಸ್ ಕಡಬ)newskadaba.com  ದಕ್ಷಿಣ ಆಫ್ರೀಕಾ, ಫೆ.15. ಜಿಂಬಾಬ್ವೆಯ ಗಡಿಯಲ್ಲಿರುವ ಲಿಂಪೊಪೋದಲ್ಲಿನ ರಾಷ್ಟ್ರೀಯ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಬಸ್ ಮತ್ತು ಶಸ್ತ್ರಸಜ್ಜಿತ ಟ್ರಕ್‌ ಪರಸ್ಪರ ಡಿಕ್ಕಿಯಾಗಿ 20 ಜನರು ಮೃತಪಟ್ಟಿದ್ದು, 60 ಮಂದಿ ಗಾಯಗೊಂಡಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಸರ್ಕಾರ ತಿಳಿಸಿದೆ.

ಅಪಘಾತವಾದ ರಸ್ತೆ ಕೆಳಗಿರುವ ನದಿಯಲ್ಲಿ ಕೊಚ್ಚಿ ಹೋದವರ ರಕ್ಷಣೆಗಾಗಿ ಹುಡುಕಾಟ ನಡೆಸುತ್ತಿದೆ. ಈ ಪ್ರದೇಶ ಭಾರೀ ಮಳೆಗೆ ತತ್ತರಿಸಿದೆ ಎನ್ನಲಾಗಿದೆ.

Scroll to Top