ಮದುವೆಯಾದ ಮೂರೇ  ದಿನದಲ್ಲಿ ದುರಂತ  ಅಂತ್ಯ ಕಂಡ ನವದಂಪತಿ!

(ನ್ಯೂಸ್ ಕಡಬ) newskadaba.com ಭುವನೇಶ್ವರ್,ಫೆ.15. ಮದುವೆಯಾಗಿ ಮೂರೇ ದಿನದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ನವದಂಪತಿ ಮೃತಪಟ್ಟ ಘಟನೆ ಒಡಿಶಾ ಬೆರ್ಹಾಂಪುರ್ನಲ್ಲಿ ನಡೆದಿದೆ.   ಮೃತರನ್ನು ಬೆರ್ಹಾಂಪುರ್  ಮೂಲದ ಸಿ.ಎಚ್.ಪ್ರನೇತಾ ಮತ್ತು ಆಂಧ್ರ ಪ್ರದೇಶದ ಇಚ್ಚಫುರ್ ಮೂಲದ ಜಿ ಬೆನು ಎಂದು ಗುರುತಿಸಲಾಗಿದೆ.

ಪ್ರನೇತಾ ಮತ್ತು ಬೆನು ಮದುವೆಯಾಗಿ ಮೂರು ದಿನಗಳ ಬಳಿಕ ಬೈಕ್ ನಲ್ಲಿ ಬೆರ್ಹಾಂಪುರ್ ಗೆ  ಬರುತ್ತಿದ್ದರು .ಎದುರಿಂದ ಬರುತ್ತಿದ್ದ ಟ್ರ್ಯಾಕ್ಟರ್ ಗೆ ಬೈಕ್  ಢಿಕ್ಕಿ ಹೊಡೆದ ಪರಿಣಾಮವಾಗಿ  ಗಂಭೀರವಾಗಿ ಗಾಯಗೊಂಡಿದ್ದ ದಂಪತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

 

Scroll to Top