(ನ್ಯೂಸ್ ಕಡಬ) newskadaba.com ಪಾಣಿಪತ್, ಜೂ. 29. ಬೀದಿ ನಾಯಿಯೊಂದು ನವಜಾತ ಶಿಶುವನ್ನು ಎಳೆದೊಯ್ದು ಕಚ್ಚಿದ ಪರಿಣಾಮ ಶಿಶು ಮೃತಪಟ್ಟ ಘಟನೆ ಪಾಣಿಪತ್ ನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಎರಡು ದಿನಗಳ ಗಂಡು ಶಿಶುವೊಂದು ಆಸ್ಪತ್ರೆಯಲ್ಲಿ ಅಜ್ಜಿಯ ಪಕ್ಕದಲ್ಲಿ ಮಲಗಿದ್ದ ವೇಳೆ, ಒಳನುಗ್ಗಿದ ಬೀದಿ ನಾಯಿಯೊಂದು ಮಗುವನ್ನು ಹೊರಗಡೆ ಎಳೆದೊಯ್ದು ಕಚ್ಚಿ ಗಾಯಗೊಳಿಸಿದೆ. ಈ ಘಟನೆ ಯಾರ ಗಮನಕ್ಕೂ ಬಾರದೇ ತಡವಾಗಿ ಬೆಳಕಿಗೆ ಬಂದಿದೆ. ಆದರೆ ಅದಾಗಲೇ ಮಗು ಮೃತಪಟ್ಟಿತ್ತು. ಸಿಸಿಟಿವಿ ಪರಿಶೀಲಿಸಿದಾಗ ತಡರಾತ್ರಿ ಎರಡು ಗಂಟೆಯ ವೇಳೆಗೆ ಶಿಶುವನ್ನು ನಾಯಿ ಹೊರಗಡೆ ಎಳೆದೊಯ್ದಿರುವುದು ಗೊತ್ತಾಗಿದೆ. ಶಿಶುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.