ಶ್ರೀನಗರ :ಗುಂಡಿನ ಚಕಮಕಿ ➤ ಇಬ್ಬರು ಉಗ್ರರ ಸದೆ ಬಡಿದ ಸೇನೆ



(ನ್ಯೂಸ್ ಕಡಬ) newskadaba.com ಶ್ರೀನಗರ, ಅ. 10: ಗುಂಡಿನ ಚಕಮಕಿ ವೇಳೆ ಭಾರತೀಯ ಸೇನೆಯ ಯೋಧರು ಇಬ್ಬರು ಉಗ್ರರನ್ನು ಸದೆಬಡಿದಿದ್ದಾರೆ.ಜಮ್ಮು ಕಾಶ್ಮೀರದ ಕುಲ್ಗಮ್ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.







ಎನ್‍ಕೌಂಟರ್ ಕಾರ್ಯಾಚರಣೆ ಇನ್ನೂ ನಡೆಯುತ್ತಿರುವುದರಿಂದ ಇಬ್ಬರು ಉಗ್ರರ ಮೃತ ದೇಹವನ್ನು ಇನ್ನೂ ಪಡೆದುಕೊಂಡಿಲ್ಲ. ಕಾರ್ಯಾಚರಣೆ ಬಳಿಕ ಉಗ್ರರ ಗುರುತು ಪತ್ತೆಯಾಗಲಿದೆ ಎಂದು ಸೇನೆಯ ಅಧಿಕಾರಿ ಮೂಲಗಳು ತಿಳಿಸಿವೆ.ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆ ಭಾರತೀಯ ಸೇನೆಯ 01 ಆರ್‍ಆರ್ ಹಾಗೂ ಜಮ್ಮು ಕಾಶ್ಮಿರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಕುಲ್ಗಮ್‍ನ ಚಿಂಗಮ್ ಬಳಿಯ ಉಗ್ರರ ಅಡುಗುದಾಣವನ್ನು ಸುತ್ತುವರಿದು ಹುಡುಕಾಟದ ಕಾರ್ಯಾಚರಣೆ ನಡೆಸುವ ವೇಳೆ ಗುಂಡಿನ ಚಕಮಕಿ ಏರ್ಪಟ್ಟಿದೆ ಎಂದು ಎಂದು ಮೂಲಗಳು ತಿಳಿಸಿವೆ.






 

 

error: Content is protected !!
Scroll to Top