ಗೌರಿ ಲಂಕೇಶ್ ಹತ್ಯೆ ಪ್ರಕರಣ ► ಇಂದು ರಾಷ್ಟ್ರಮಟ್ಟದ ಪ್ರತಿರೋಧ ಸಮಾವೇಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.12. ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆಯ ವತಿಯಿಂದ ಮಂಗಳವಾರದಂದು ರಾಷ್ಟ್ರಮಟ್ಟದ ಪ್ರತಿರೋಧ ಸಮಾವೇಶವು ಸೆಂಟ್ರಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಈ ರಾಷ್ಟ್ರಮಟ್ಟದ ಪ್ರತಿರೋಧ ಸಮಾವೇಶದಲ್ಲಿ ಸೀತರಾಂ ಯೆಚೂರಿ, ಸಾಯಿನಾಥ್, ಮೇಧಾ ಪಾಟ್ಕರ್, ಆನಂದ್ ಪಟವರ್ಧನ್, ತೀಸ್ತಾ ಸೆಟಲ್ವಾಡ್, ಯೋಗೆಂದ್ರ ಯಾದವ್, ಜಿಗ್ನೇಶ್ ಮೇವಾನಿ, ವಿವಿಧ ಕವಿಗಳು, ಬರಹಗಾರರು, ಹೋರಾಟಗಾರರು, ಕಲಾವಿದರು, ಪತ್ರಕರ್ತರು ಮತ್ತು ಸಾಮಾನ್ಯ ಜನತೆ ಭಾಗವಹಿಸಲಿದ್ದಾರೆ.

Scroll to Top