(ನ್ಯೂಸ್ ಕಡಬ) newskadaba.com, ಸೆ.09. ಒಡಿಶಾದಲ್ಲಿ ನಡೆದ AM/NS ಇಂಡಿಯಾ ಜೂನಿಯರ್ ಖೋ ಖೋ ಚಾಂಪಿಯನ್ಷಿಪ್ 2026ರ ಬಾಲಕರ ವಿಭಾಗದಲ್ಲಿ ಕರ್ನಾಟಕ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ.ರೋಮಾಂಚನಕಾರಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ 36–34 ಅಂಕಗಳಿಂದ ಮಹಾರಾಷ್ಟ್ರವನ್ನು ಕೇವಲ 2 ಅಂಕಗಳ ಅಂತರದಿಂದ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕರ್ನಾಟಕದ ಇಬ್ರಾಹಿಂ ‘ಅತ್ಯುತ್ತಮ ಅಟ್ಯಾಕರ್’ ಹಾಗೂ ಅನಿಕೇತ್ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಮುಡಿಗೇರಿಸಿಕೊಂಡರೆ, ಮಹಾರಾಷ್ಟ್ರದ ಪಾರ್ಥ್ ದೇವಕೇತೆ ‘ಅತ್ಯುತ್ತಮ ಡಿಫೆಂಡರ್’ ಗೌರವಕ್ಕೆ ಪಾತ್ರರಾದರು.
ಕೊಲ್ಲಾಪುರ ತಂಡವನ್ನು ಮಣಿಸಿದ ಆತಿಥೇಯ ಒಡಿಶಾ ತಂಡ ಕಂಚಿನ ಪದಕಕ್ಕೆ ಭಾಜನವಾಯಿತು.ಒಡಿಶಾ ಭಾರತೀಯ ಖೋ ಖೋ ಫೆಡರೇಶನ್ ಹಾಗೂ AM/NS ಇಂಡಿಯಾ ಸಹಯೋಗದಲ್ಲಿ ನಡೆದ ಈ 3 ದಿನಗಳ ಟೂರ್ನಿಯಲ್ಲಿ ದೇಶದ 12 ತಂಡಗಳಿಂದ 180ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.




