(ನ್ಯೂಸ್ ಕಡಬ) newskadaba.com, ಸೆ.09. ಕೃಷ್ಣಾಪುರದಿಂದ ಬೆಂಗ್ರೆಗೆ ತೆರಳುತ್ತಿದ್ದ ರಿಕ್ಷಾ ಪಲ್ಟಿಯಾದ ಪರಿಣಾಮ ಮೂವರು ಗಾಯಗೊಂಡ ಘಟನೆ ಬೆಂಗ್ರೆ ಸೂಪರ್ ಸ್ಟಾರ್ ಗ್ರೌಂಡ್ ಬಳಿ ಸಂಭವಿಸಿದೆ. ರಿಕ್ಷಾದಲ್ಲಿ ಜೋಹರಾ (68), ಅವರ ಮಗಳು ಸಪ್ನಾಜ್ (33), ಮೊಮ್ಮಕ್ಕಳಾದ ಮಹಮ್ಮದ್ ಸಲ್ವಾನ್ (4) ಮತ್ತು ಮಹಮ್ಮದ್ ಶೆಹಾಜಾನ್ (10 ತಿಂಗಳು) ಪ್ರಯಾಣಿಸುತ್ತಿದ್ದರು.

ಚಾಲಕ ಅಬ್ದುಲ್ ಅಜೀಜ್ ಅವರ ದುಡುಕುತನ ಮತ್ತು ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ ಎನ್ನಲಾಗಿದೆ. ಅಪಘಾತದಲ್ಲಿ ಜೋಹರಾ ಅವರ ಬಲಗೈ ಹೆಬ್ಬೆರಳು ತುಂಡಾಗಿದೆ. ಸಪ್ನಾಜ್ ಅವರ ತಲೆಯ ಹಿಂಬದಿಗೆ ಗುದ್ದಿದ ಗಾಯವಾಗಿದೆ. ಚಾಲಕ ಅಬ್ದುಲ್ ಅಜೀಜ್ ಅವರ ಬಲಗೈ ಭುಜಕ್ಕೆ ಗಾಯವಾಗಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




