ಪುತ್ತೂರು: ಕಾಲೇಜು ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ➤ ವಾಟ್ಸ್ಅಪ್ ನಲ್ಲಿ ಶೇರ್ ಮಾಡಿದ ಕಡಬ ನಿವಾಸಿ ಸೇರಿದಂತೆ ಎಂಟು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಜು.04. ಪುತ್ತೂರಿನ ಕಾಲೇಜೊಂದರ ವಿಧ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಎಂಟು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಕಡಬ ಪೇಟೆ ನಿವಾಸಿ ಶ್ರೇಯಾನ್ಸ್ ಎಸ್. (20), ಪುತ್ತೂರು ಕಸ್ಬಾ ಗ್ರಾಮದ ಮುರಳೀಧರ (29), ಕಬಕ ಗ್ರಾಮದ ನೆಹರು ನಗರ ನಿವಾಸಿ ಚಂದ್ರಶೇಖರ ಮಯ್ಯ (47), ಅರ್ಯಾಪು ಗ್ರಾಮದ ಪೂವಪ್ಪ ಕೆ. (26), ಪವನ್ ಕುಮಾರ್ ಡಿ. (19), ಪುತ್ತೂರು ಕಸಬಾ ಗ್ರಾಮದ ಮೋಹಿತ್‌ ಪಿ.ಜಿ. (18), ಕೊಳ್ತಿಗೆ ಗ್ರಾಮದ ಧ್ಯಾನ್‌ ಎ.ಎನ್‌. (18) ಹಾಗೂ ಪುತ್ತೂರು ಕಸಬಾ ಗ್ರಾಮದ ಅದ್ವಿತ್‌ ಕುಮಾರ್‌ ನಾಯ್ಕ್‌ ಎನ್‌. (19) ಎಂದು ಗುರುತಿಸಲಾಗಿದೆ.

Also Read  ಆಲೋಪತಿ ಬಗ್ಗೆ ಅವಹೇಳನ ➤ ಬಾಬಾ ರಾಮದೇವ್ ವಿರುದ್ಧ ಎಫ್ ಐಆರ್ ದಾಖಲು

ಪುತ್ತೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಯಾದ ಬಂಟ್ವಾಳ ನಿವಾಸಿ ಪ್ರಖ್ಯಾತ್ ಎಂಬಾತನು ತಾನು ತನ್ನ ಸ್ನೇಹಿತರೊಂದಿಗೆ ಸೇರಿ ನಡೆಸಿರುವ ಸಾಮೂಹಿಕ ಅತ್ಯಾಚಾರದ ವಿಡಿಯೋವನ್ನು ತನ್ನ ವಾಟ್ಸ್ಅಪ್ ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದು ಈ ವಿಡಿಯೋವನ್ನು ಅದೇ ಕಾಲೇಜಿನ ಮೋಹಿತ್‌ ಎಂಬಾತನು ತನ್ನ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡಿದ್ದ ಎನ್ನಲಾಗಿದೆ.

ಕಾಲೇಜಿನ ವಿದ್ಯಾರ್ಥಿಗಳ ಚುನಾವಣೆ ಸಮಯ ಗುಂಪು – ಗುಂಪುಗಳಾಗಿ ವಿದ್ಯಾರ್ಥಿಗಳು ವೈಷಮ್ಯ ಬೆಳೆಸಿಕೊಂಡಿದ್ದು, ಒಂದು ಗುಂಪಿನಲ್ಲಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ತೇಜೋವಧೆ ಮಾಡುವ ಉದ್ದೇಶದಿಂದ ಶ್ರೇಯಾನ್ಸ್ ಎಸ್. ತನಗೆ ಬೇರೆಯವರ ಮೂಲಕ ದೊರೆತ ಈ ವಿಡಿಯೋವನ್ನು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದನು. ಅದು ವೈರಲ್ ಆಗಿದ್ದರಿಂದ ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪ್ರಕರಣದ ಜಾಡು ಹಿಡಿದು ವಾಟ್ಸ್ಅಪ್ ನಲ್ಲಿ ಶೇರ್ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ಗೂಗಲ್ ಪ್ಲೇ ಸ್ಟೋರ್ ಡೌನ್ ➤ ಬಳಕೆದಾರರ ಪರದಾಟ

error: Content is protected !!
Scroll to Top