(ನ್ಯೂಸ್ ಕಡಬ) newskadaba.com ಜೂ. 26. 2026ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ 5 ವರ್ಷದೊಳಗಿನ ಮಕ್ಕಳಿಗೆ ಜೂ.28ರ ಭಾನುವಾರದಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ನಿರ್ಮೂಲನಾ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು 5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ತಪ್ಪದೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿಕೊಳ್ಳುವಂತೆ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಪ್ರಕಟಣೆ ತಿಳಿಸಿದೆ.
[9:53 pm, 25/6/2026] Rzythachu: ಜೂನ್ 28ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ
[10:21 pm, 25/6/2026] Rzythachu: ಭಾರತೀಯ ವಿದೇಶಾಂಗ ಸಚಿವಾಲಯವು ಪಾಸ್ ಪೋರ್ಟ್ ಆಕಾಂಕ್ಷಿಗಳಿಗೆ ಭಾರಿ ಶಾಕ್ ನೀಡಿದೆ. ಪಾಸ್‌ಪೋರ್ಟ್ (ತಿದ್ದುಪಡಿ) ನಿಯಮಗಳು, 2026ರ ಅಡಿಯಲ್ಲಿ ಹೊಸ ಪಾಸ್‌ಪೋರ್ಟ್, ತತ್ಕಾಲ್ ಮತ್ತು ಇತರೆ ಸೇವೆಗಳ ದರವನ್ನು ಪರಿಷ್ಕರಿಸಿ ಜೂನ್ 25ರ ಗುರುವಾರದಂದು ಅಧಿಸೂಚನೆ ಹೊರಡಿಸಿದೆ. ಈ ಹೊಸ ನಿಯಮ ಹಾಗೂ ಪರಿಷ್ಕೃತ ಶುಲ್ಕಗಳು ಜುಲೈ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿರುವ ಹೊಸ ದರಗಳ ಸಂಪೂರ್ಣ ಪಟ್ಟಿ ಇಲ್ಲಿದೆ:
18 ವರ್ಷ ಮೇಲ್ಪಟ್ಟವರಿಗೆ ಪಾಸ್‌ಪೋರ್ಟ್ ಶುಲ್ಕ (ಹೊಸ/ನವೀಕರಣ)
ಸಾಮಾನ್ಯ ಹಾಗೂ ಜಂಬೋ ಪಾಸ್‌ಪೋರ್ಟ್ ಪಡೆಯಲು ಜುಲೈ 1 ರಿಂದ ಅನ್ವಯವಾಗುವ ಹೊಸ ದರಗಳು:
ಸಾಮಾನ್ಯ 36 ಪುಟಗಳ ಪಾಸ್‌ಪೋರ್ಟ್: ಸಾಮಾನ್ಯ ಪ್ರಕ್ರಿಯೆಗೆ ರೂ. 2,500 ಮತ್ತು ತತ್ಕಾಲ್ ಯೋಜನೆಗೆ ರೂ. 5,000.
60 ಪುಟಗಳ ಜಂಬೋ ಪಾಸ್‌ಪೋರ್ಟ್: ಸಾಮಾನ್ಯ ಪ್ರಕ್ರಿಯೆಗೆ ರೂ. 3,500 ಮತ್ತು ತತ್ಕಾಲ್ ಯೋಜನೆಗೆ ರೂ. 6,000.
18 ವರ್ಷದೊಳಗಿನ ಮಕ್ಕಳಿಗೆ ಪಾಸ್‌ಪೋರ್ಟ್ ದರ
36 ಪುಟಗಳ ಮೈನರ್ಸ್ ಪಾಸ್‌ಪೋರ್ಟ್: ಸಾಮಾನ್ಯ ಪ್ರಕ್ರಿಯೆಗೆ ರೂ. 1,750 ಹಾಗೂ ತತ್ಕಾಲ್ ಯೋಜನೆಗೆ ರೂ. 4,250.
ಒಂದು ವೇಳೆ ನಿಮ್ಮ ಪಾಸ್‌ಪೋರ್ಟ್ ಹಾನಿಗೊಳಗಾಗಿದ್ದರೆ ಅಥವಾ ಕಳೆದುಹೋಗಿ ಹೊಸ ಪಾಸ್ ಪೋರ್ಟ್ ಅರ್ಜಿ ಸಲ್ಲಿಸಿದರೆ ಪರಿಷ್ಕೃತ ದರಗಳು ಹೀಗಿವೆ:
36 ಪುಟಗಳ ಬದಲೀ ಪಾಸ್‌ಪೋರ್ಟ್: ಸಾಮಾನ್ಯ ವಿಭಾಗದಲ್ಲಿ ರೂ. 5,000 ಹಾಗೂ ತತ್ಕಾಲ್‌ನಲ್ಲಿ ರೂ. 7,500.
60 ಪುಟಗಳ ಬದಲೀ ಪಾಸ್‌ಪೋರ್ಟ್: ಸಾಮಾನ್ಯ ವಿಭಾಗದಲ್ಲಿ ರೂ. 6,000 ಹಾಗೂ ತತ್ಕಾಲ್‌ನಲ್ಲಿ ರೂ. 8,500.
ಮಕ್ಕಳ ಪಾಸ್‌ಪೋರ್ಟ್ ಬದಲಾವಣೆ (Minor Passport Replacement): ಸಾಮಾನ್ಯ ವಿಭಾಗದಲ್ಲಿ ರೂ. 4,250 ಹಾಗೂ ತತ್ಕಾಲ್‌ನಲ್ಲಿ ರೂ. 6,750.
ಇತ್ತೀಚೆಗೆ ನಡೆದ ‘ಪಾಸ್‌ಪೋರ್ಟ್ ಸೇವಾ ದಿವಸ್’ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವಾಲಯವು ಮಹತ್ವದ ಸ್ಪಷ್ಟನೆ ನೀಡಿದೆ. ಪಾಸ್‌ಪೋರ್ಟ್ ಎಂಬುದು ಕೇವಲ ಅಂತರರಾಷ್ಟ್ರೀಯ ಪ್ರಯಾಣಕ್ಕೆ ಬಳಸುವ ಪ್ರಯಾಣದ ದಾಖಲೆ ಮಾತ್ರವಾಗಿದೆ. ಇದು ಭಾರತದ ಪೌರತ್ವವನ್ನು ಸಾಬೀತುಪಡಿಸುವ ಸ್ವತಂತ್ರ ಪ್ರಮಾಣಪತ್ರವಲ್ಲ. ಉನ್ನತ ಮಟ್ಟದ ಪರಿಶೀಲನೆಗಳ ನಂತರವೇ ಇದನ್ನು ನೀಡಲಾಗುತ್ತದೆಯಾದರೂ, ಇದರ ಮುಖ್ಯ ಕಾನೂನು ಉದ್ದೇಶ ವಿದೇಶಗಳಲ್ಲಿ ಭಾರತೀಯ ರಾಷ್ಟ್ರೀಯತೆಯನ್ನು ದೃಢೀಕರಿಸುವುದಷ್ಟೇ ಆಗಿದೆ ಎಂದು ಸಚಿವಾಲಯ ನೆನಪಿಸಿದೆ.










