(ನ್ಯೂಸ್ ಕಡಬ) newskadaba.com, ಜೂ.26 ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಪೊಲೀಸರು ವಿಶೇಷ ಅಭಿಯಾನದ ಮೂಲಕ ಕಠಿಣ ಕ್ರಮ ಕೈಗೊಂಡಿದ್ದಾರೆ. 2026ರ ಜನವರಿಯಿಂದ ಮೇ ವರೆಗಿನ 5 ತಿಂಗಳ ಅವಧಿಯಲ್ಲಿ ಒಟ್ಟು 21,039 ಪ್ರಕರಣಗಳನ್ನು ದಾಖಲಿಸಲಾಗಿದ್ದು, ನಿಯಮ ಉಲ್ಲಂಘಿಸಿದವರಿಂದ ₹96,19,500 ದಂಡ ವಸೂಲಿ ಮಾಡಲಾಗಿದೆ.
NH-66, NH-75 ಸೇರಿದಂತೆ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆಯುವ ಅಪಘಾತಗಳಿಗೆ ಅಜಾಗರೂಕತೆ ಹಾಗೂ ಅತಿ ವೇಗವೇ ಪ್ರಮುಖ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹೆಲ್ಮೆಟ್ ಧರಿಸದ 4,479 ಸವಾರರಿಂದ ₹22,00,300 ಹಾಗೂ 5,693 ಹಿಂಬದಿ ಸವಾರರಿಂದ ₹22,69,300 ದಂಡ ಪಡೆಯಲಾಗಿದೆ. ಇತರ ಸಾಮಾನ್ಯ ಅಪರಾಧಗಳಿಗೆ 6,853 ಪ್ರಕರಣಗಳಡಿ ₹29,28,200 ವಿಧಿಸಲಾಗಿದೆ.
1,078 ನೋ-ಎಂಟ್ರಿ ಪ್ರಕರಣಗಳಿಗೆ ₹5.35 ಲಕ್ಷ ಮತ್ತು 922 ನಂಬರ್ ಪ್ಲೇಟ್ ದೋಷಗಳಿಗೆ ₹4.55 ಲಕ್ಷ ದಂಡ ವಸೂಲಿ ಮಾಡಲಾಗಿದೆ.555 ಟ್ರಿಪಲ್ ರೈಡಿಂಗ್ ಪ್ರಕರಣಗಳಿಂದ ₹2.77 ಲಕ್ಷ ಹಾಗೂ 389 ಸಿಗ್ನಲ್ ಜಂಪ್ ಪ್ರಕರಣಗಳಿಂದ ₹1.92 ಲಕ್ಷ ದಂಡ ಸಂಗ್ರಹವಾಗಿದೆ..ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ 145 ಮಂದಿಯನ್ನು ಪತ್ತೆಹಚ್ಚಲಾಗಿದ್ದು, ಅವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.









