ಹಿರಿಯ ಪತ್ರಕರ್ತ ಜನಾರ್ದನ ಮರವಂತೆ ಇನ್ನಿಲ್ಲ



(ನ್ಯೂಸ್‌ ಕಡಬ) newskadaba.com,  ಜೂ.06 ಕುಂದಾಪುರ: ರಾಷ್ಟ್ರೀಯ ಮಟ್ಟದ ಪಂಚಾಯತ್ ರಾಜ್ ತಜ್ಞ, ಹಿರಿಯ ಪತ್ರಕರ್ತ ಹಾಗೂ ನಿವೃತ್ತ ಪ್ರಾಂಶುಪಾಲರಾದ ಜನಾರ್ದನ ಮರವಂತೆ (88) ಅವರು ಶನಿವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.







ಇಂಗ್ಲೀಷ್ ಉಪನ್ಯಾಸಕರಾಗಿದ್ದ ಅವರು, ‘ಪ್ರಜಾವಾಣಿ’ ಹಾಗೂ ‘ಉದಯವಾಣಿ’ ಪತ್ರಿಕೆಗಳ ವರದಿಗಾರರಾಗಿ, ಬೈಂದೂರು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಮತ್ತು ಮರವಂತೆ ಗ್ರಾ.ಪಂ. ಅಧ್ಯಕ್ಷರಾಗಿ ರಾಷ್ಟ್ರ ಮಟ್ಟದ ಮನ್ನಣೆ ತಂದುಕೊಟ್ಟಿದ್ದರು.






ಜೂನ್ 7ರ ಭಾನುವಾರ ಬೆಳಿಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮರವಂತೆಯ ‘ಸಾಧನಾ ಸಭಾಂಗಣ’ದಲ್ಲಿ ಅಂತಿಮ ದರ್ಶನಕ್ಕೆ ಅವಕಾಶವಿರುತ್ತದೆ. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.

error: Content is protected !!
Scroll to Top