ಬೆಂಗಳೂರು-ಮುಂಬೈ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ ಟೇಕಾಫ್ ಆದ ಬೆನ್ನಲ್ಲೇ ತುರ್ತು ಭೂಸ್ಪರ್ಶ

(ನ್ಯೂಸ್‌ ಕಡಬ) newskadaba.com,  ಜೂ.06 ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆಗುತ್ತಿದ್ದ ಬೆಂಗಳೂರು-ಮುಂಬೈ ಇಂಡಿಗೋ ವಿಮಾನಕ್ಕೆ (6E-6283) ಹಕ್ಕಿ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ವೇಗವಾಗಿ ಚಲಿಸುತ್ತಿದ್ದಾಗ ಹಕ್ಕಿ ಡಿಕ್ಕಿ ಹೊಡೆದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಪೈಲಟ್ ವಿಮಾನವನ್ನು ಮತ್ತೆ ನಿಲ್ದಾಣಕ್ಕೆ ಮರಳಿಸಿದರು. ಬಳಿಕ ತಾಂತ್ರಿಕ ಸಿಬ್ಬಂದಿ ಏರ್‌ಬಸ್ ಎ321 ನಿಯೋ ವಿಮಾನದ ಎರಡೂ ಎಂಜಿನ್‌ಗಳು ಸೇರಿದಂತೆ ಅಗತ್ಯ ತಪಾಸಣೆ ನಡೆಸಿ, ಸುರಕ್ಷಿತವೆಂದು ಘೋಷಿಸಿದರು.

ಸಂಜೆ 7:04ಕ್ಕೆ ಹೊರಡಬೇಕಿದ್ದ ವಿಮಾನವು ಈ ತಪಾಸಣೆಯಿಂದಾಗಿ ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬವಾಗಿ, ಅಂತಿಮವಾಗಿ ರಾತ್ರಿ 8:46ಕ್ಕೆ ಮುಂಬೈಗೆ ಪ್ರಯಾಣ ಬೆಳೆಸಿತು. ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ.

Scroll to Top