(ನ್ಯೂಸ್ ಕಡಬ) newskadaba.com,ಫೆ.05 : ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಕ್ರಿಕೆಟ್ ಪಂದ್ಯವು ರಾಜತಾಂತ್ರಿಕ ಸಂಘರ್ಷದಿಂದಾಗಿ ರದ್ದಾಗುವ ಭೀತಿ ಎದುರಾಗಿದೆ. ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಷರೀಫ್ ಅವರು ಬಾಂಗ್ಲಾದೇಶದ ಪರವಾಗಿ ಬ್ಯಾಟ್ ಬೀಸಿದ್ದು, ಭಾರತದ ವಿರುದ್ಧದ ಪಂದ್ಯದಲ್ಲಿ ತಮ್ಮ ತಂಡ ಭಾಗವಹಿಸುವುದಿಲ್ಲ ಎಂಬ ಕಠಿಣ ನಿಲುವು ತಳೆದಿದ್ದಾರೆ.
ಬಾಂಗ್ಲಾದೇಶದ ಮೇಲಿನ ಅಂತರಾಷ್ಟ್ರೀಯ ಕ್ರಿಕೆಟ್ ನಿರ್ಬಂಧಗಳನ್ನು ವಿರೋಧಿಸಿ ಪಾಕಿಸ್ತಾನ ಈ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ಐಸಿಸಿ (ICC) ಮತ್ತು ಬಿಸಿಸಿಐ (BCCI) ಗೆ ಆರ್ಥಿಕವಾಗಿ ಭಾರಿ ಹೊಡೆತ ಬೀಳುವ ಸಾಧ್ಯತೆಯಿದೆ. ಈ ಬೆಳವಣಿಗೆಯು ಕ್ರೀಡಾ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ. ರಾಜಕೀಯ ಕಾರಣಗಳಿಗಾಗಿ ಕ್ರೀಡೆಯನ್ನು ಬಲಿಕೊಡಲಾಗುತ್ತಿದೆ ಎಂಬ ಆಕ್ರೋಶವೂ ವ್ಯಕ್ತವಾಗುತ್ತಿದೆ….






