ಬಾಯ್‌ಫ್ರೆಂಡ್ ವಿಚಾರಕ್ಕೆ ಜಗಳ: ಸ್ನೇಹಿತೆಯ ಸಂಸಾರಕ್ಕೆ ಬೆಂಕಿ ಇಟ್ಟು ಜೈಲು ಸೇರಿದ ಯುವತಿ

(ನ್ಯೂಸ್‌ ಕಡಬ) newskadaba.com  ಜೂ.19 ಆರೋಪಿ ಶ್ವೇತಾಳ ಬಾಯ್‌ಫ್ರೆಂಡ್ ಜೊತೆ ಆಕೆಯ ಸ್ನೇಹಿತೆ ಆಪ್ತವಾಗಿ ಬೆಳೆದಿದ್ದೇ ಈ ಜಗಳಕ್ಕೆ ಕಾರಣವಾಗಿದೆ. ಇದರಿಂದ ಕೋಪಗೊಂಡ ಶ್ವೇತಾ, ತನ್ನ ಬಾಯ್‌ಫ್ರೆಂಡ್ ಮೊಬೈಲ್‌ನಿಂದ ಸ್ನೇಹಿತೆಯ ಖಾಸಗಿ ಫೋಟೋಗಳನ್ನು ಕಳವು ಮಾಡಿದ್ದಾಳೆ. ತದನಂತರ ಆ ಫೋಟೋಗಳನ್ನು ಸ್ನೇಹಿತೆಯ ಪತಿಗೆ ಕಳುಹಿಸಿ ಅವರ ಸಂಸಾರದಲ್ಲಿ ಬಿರುಕು ಮೂಡಿಸಿದ್ದಾಳೆ.

ಅಷ್ಟಕ್ಕೆ ನಿಲ್ಲಿಸದೇ ಉಳಿದ ಫೋಟೋಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಶ್ವೇತಾ ಬೆದರಿಕೆ ಹಾಕಿದ್ದಾಳೆ. ಇದರಿಂದ ಬೇಸತ್ತ ಸಂತ್ರಸ್ತೆಯ ಪತಿ ಚಾಮರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಶ್ವೇತಾಳ ಮೊಬೈಲ್ ಫೋನ್ ಪರಿಶೀಲಿಸಿದಾಗ ಹಲವು ಅಶ್ಲೀಲ ಫೋಟೋಗಳು ಪತ್ತೆಯಾಗಿದ್ದು, ಅದರಲ್ಲಿ ಕೆಲವು ರಾಜಕಾರಣಿಗಳ ಫೋಟೋಗಳೂ ಸೇರಿವೆ ಎನ್ನಲಾಗಿದೆ. ಪೊಲೀಸರು ಸದ್ಯ ಆರೋಪಿಯ ಹಿನ್ನೆಲೆಯ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Scroll to Top