ಜಮ್ಮು: 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ..!

(ನ್ಯೂಸ್‌ ಕಡಬ) newskadaba.com, ಆ.28  ಶ್ರೀನಗರ:  ಜಮ್ಮುವಿನಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 380 ಮಿ.ಮೀ ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ಹಲವು ಕಡೆ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಜಮ್ಮುವಿನಲ್ಲಿ ನಿನ್ನೆ ದಾಖಲೆಯ 380 ಮಿ.ಮೀ ಮಳೆಯಾಗಿದೆ ಎಂದು ಎಂಇಟಿ ಕಾಶ್ಮೀರ ನಿರ್ದೇಶಕ ಡಾ. ಮುಖ್ತಾರ್ ಅಹ್ಮದ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ತಿಳಿಸಿದ್ದಾರೆ.

“1988 ರಲ್ಲಿ ಜಮ್ಮುವಿನಲ್ಲಿ ದಾಖಲಾಗಿದ್ದ 270 ಮಿ.ಮೀ ಮಳೆಯ ಹಿಂದಿನ ದಾಖಲೆಯನ್ನು ಇದು ಮುರಿದಿದೆ. ಇದು ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲಾದ ಅತಿ ಹೆಚ್ಚು ಮಳೆಯಾಗಿದೆ” ಎಂದು ಅವರು ಹೇಳಿದ್ದಾರೆ.

 

Scroll to Top