(ನ್ಯೂಸ್ ಕಡಬ) newskadaba.com ಜು. 02. ನವ ವಿವಾಹಿತ ಯುವಕನೋರ್ವನನ್ನು ಎಳೆದೊಯ್ದು ಆತನ ಖಾಸಗಿ ಅಂಗವನ್ನೇ ಕತ್ತರಿಸಿರುವಂತಹ ವಿಚಿತ್ರ ಘಟನೆ ಉತ್ತರಪ್ರದೇಶದ ರಾಂಪುರದಲ್ಲಿ ಬೆಳಕಿಗೆ ಬಂದಿದೆ.
ತನ್ನ ಅಕ್ಕ ಪಕ್ಕದ ಎಲ್ಲೇ ಕಾರ್ಯಕ್ರಮ ಇದ್ದರೂ ಡ್ಯಾನ್ಸ್ ಕಾರ್ಯಕ್ರಮ ಕೊಡಲು ಹೋಗುತ್ತಿದ್ದ ನವ ವಿವಾಹಿತ ಯುವಕನನ್ನು ದ್ವೇಷದ ಹಿನ್ನೆಲೆಯಲ್ಲಿ ಎಳೆದೊಯ್ದು ಮಾದಕ ಪಾನೀಯ ಕುಡಿಸಿ ಅವನ ಖಾಸಗಿ ಅಂಗವನ್ನು ಕತ್ತರಿಸಿದ್ದಾರೆ ಎನ್ನಲಾಗಿದೆ.
ಇದರಿಂದಾಗಿ ರಸ್ತೆಯಲ್ಲಿ ಬಿದ್ದು ತೀವ್ರ ನರಳಾಡುತ್ತಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಯ ಬೆನ್ನಲ್ಲಿಯೇ ಸಂತ್ರಸ್ತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ.









