ದ್ವೇಷ ಭಾಷಣ, ನಕಲಿ ಸುದ್ದಿಗಳ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ- ಪೊಲೀಸರಿಗೆ ಸಿಎಂ ಸೂಚನೆ



(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 02. ದ್ವೇಷ ಭಾಷಣ ಹಾಗೂ ನಕಲಿ ಸುದ್ದಿಗಳ ವಿರುದ್ಧ ಈಗಾಗಲೇ ರಾಜ್ಯ ಸರ್ಕಾರ ಕಾನೂನು ಜಾರಿಗೆ ತರಲು ಮುಂದಾಗಿದ್ದು, ಇಂತಹ ಬೆಳವಣಿಗೆ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.







ಅವರು ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿ, ದ್ವೇಷ ಭಾಷಣದ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು. ನಮಗೆ ದ್ವೇಷವಿಲ್ಲದ ಸಮಾಜ ಬೇಕು. ಆದರೆ, ಕೆಲವರು ಅಶಾಂತಿಯುಕ್ತ ಸಮಾಜವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ.






ಮಾಧ್ಯಮಗಳು ಸಿಎಂ ಅಥವಾ ಪ್ರಧಾನಿಯನ್ನು ಮೆಚ್ಚಿಸುವಲ್ಲಿ ತೊಡಗಬಾರದು, ಸತ್ಯಗಳನ್ನಷ್ಟೇ ವರದಿ ಮಾಡಬೇಕು ಎಂದು ತಿಳಿಸಿದರು.

 

error: Content is protected !!
Scroll to Top