ದೇಶದಾದ್ಯಂತ 58 ಎಂಜಿನಿಯರಿಂಗ್ ಕಾಲೇಜುಗಳು ಬಂದ್: AICTE ಮಹತ್ವದ ಆದೇಶ

(ನ್ಯೂಸ್‌ ಕಡಬ) newskadaba.com,ಜು.06  : 2025-26ರ ಶೈಕ್ಷಣಿಕ ವರ್ಷದಲ್ಲಿ ದೇಶದಾದ್ಯಂತ 58 ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜುಗಳನ್ನು ಹಂತಹಂತವಾಗಿಮುಚ್ಚಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅನುಮತಿ ನೀಡಿದೆ. ಇದರೊಂದಿಗೆ 950ಕ್ಕೂ ಹೆಚ್ಚು ತಾಂತ್ರಿಕ ಕೋರ್ಸ್‌ಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.

AICTE ನಿಗದಿಪಡಿಸಿದ ಶೈಕ್ಷಣಿಕ ಮತ್ತು ಮೂಲಸೌಕರ್ಯ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲತೆ.ಈ ಸಂಸ್ಥೆಗಳು ಪ್ರಸಕ್ತ ವರ್ಷದಿಂದ ಪ್ರಥಮ ವರ್ಷದ ಹೊಸ ವಿದ್ಯಾರ್ಥಿಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಲ್ಲಿಸಲಿವೆ.ಆದರೆ, ಈಗಾಗಲೇ ದಾಖಲಾಗಿ ಓದುತ್ತಿರುವ ವಿದ್ಯಾರ್ಥಿಗಳು ಯಾವುದೇ ಅಡಚಣೆಯಿಲ್ಲದೆ ತಮ್ಮ ಪದವಿ ಪೂರ್ಣಗೊಳಿಸಲು ಅಸ್ತಿತ್ವದಲ್ಲಿರುವ ಬ್ಯಾಚ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಒಟ್ಟು 58 ಕಾಲೇಜುಗಳಲ್ಲಿ 3 ಸರ್ಕಾರಿ ಅನುದಾನಿತ ಹಾಗೂ ಉಳಿದವು ಖಾಸಗಿ ಸಂಸ್ಥೆಗಳಾಗಿವೆ

Scroll to Top