ಬೈಕಂಪಾಡಿ ಹೆದ್ದಾರಿ ದರೋಡೆ: ಮೂವರ ಬಂಧನ, ತಲೆಮರೆಸಿಕೊಂಡಿರುವ 14 ಆರೋಪಿಗಳ ಫೋಟೋ ಬಿಡುಗಡೆ ಮಾಡಿದ ಪಣಂಬೂರು ಪೊಲೀಸ್



(ನ್ಯೂಸ್‌ ಕಡಬ) newskadaba.com,ಜು.06  ಮಂಗಳೂರು: ಜೂನ್ 29 ರಂದು ಮಂಗಳೂರಿನ ಬೈಕಂಪಾಡಿ ಬಳಿ ಹೆದ್ದಾರಿಯಲ್ಲಿ ಪಯ್ಯನ್ನೂರು ಮೂಲದ ಚಿನ್ನದ ವ್ಯಾಪಾರಿ ವಿಕಾಸ್ ಎಂಬವರನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿ 180 ಗ್ರಾಂ ಚಿನ್ನ ಹಾಗೂ ₹23 ಲಕ್ಷ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಲಾಗಿತ್ತು.







ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಂಬೂರು ಪೊಲೀಸರು ಈಗಾಗಲೇ ಮೂವರು ಸಹಚರರನ್ನು (ನಿಮಿಲ್, ಇರ್ಷಾದ್ ಮತ್ತು ಮುಸ್ತಾಫ) ಬಂಧಿಸಿದ್ದಾರೆ. ಆದರೆ, ಕೃತ್ಯದಲ್ಲಿ ನೇರವಾಗಿ ಭಾಗಿಯಾದ ಪ್ರಮುಖ 14 ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದಾರೆ.






ತಲೆಮರೆಸಿಕೊಂಡಿರುವ ಆರೋಪಿಗಳು:

ಕೇರಳ ಹಾಗೂ ಕೊಡಗು ಮೂಲದ ಶ್ರೀರಾಗ್, ಅತುಲ್, ಮಿಥುನ್ಲಾಲ್, ಅಜೀರ್ ತರಾಯಿಲ್, ವೈಶಾಕ್, ಅಸೀರ್ ಪಯ್ಯನ್ನೂರ್, ಪ್ರಣವ್, ವಿಜಿಲ್ ಅಂಜರಕಂಡಿ, ಉಬೈದ್, ಫಿರೋಜ್, ಮೊಯ್ದು ಅಬ್ಬಾಸ್, ಜಿಯಾದ್, ಜಮೀರ್ ಅಲಿಕಾ ಮತ್ತು ಪಾಂಡಿಚೇರಿಯ ಶಿಬಿನ್ ಗಂಗಾಧರನ್ ಪ್ರಮುಖ ಆರೋಪಿಗಳಾಗಿದ್ದಾರೆ.

ಪೊಲೀಸರು ಈ ಆರೋಪಿಗಳ ಫೋಟೋಗಳನ್ನು ಬಿಡುಗಡೆ ಮಾಡಿದ್ದು, ಇವರ ಬಗ್ಗೆ ಮಾಹಿತಿ ನೀಡುವ ಸಾರ್ವಜನಿಕರಿಗೆ ಸೂಕ್ತ ಬಹುಮಾನ ನೀಡುವುದಾಗಿ ಮತ್ತು ಅವರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ.

error: Content is protected !!
Scroll to Top