ಬಿಹಾರದಲ್ಲಿ ಇಂದು 5000 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಚಾಲನೆ



(ನ್ಯೂಸ್ ಕಡಬ) newskadaba.com ಜೂ. 20. ಉತ್ತರ ಬಿಹಾರದ ಸಂಪರ್ಕಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಸಿವಾನ್‌ನಲ್ಲಿ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಲಿದ್ದಾರೆ. ಜೊತೆಗೆ ರಾಜ್ಯದ ವಿವಿಧೆಡೆ 5,000 ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.







 

ವರದಿಯ ಪ್ರಕಾರ, ಉತ್ತರ ಬಿಹಾರದ ಸಂಪರ್ಕಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮುಜಾಫರ್‌ಪುರ ಮತ್ತು ಬೆಟ್ಟಿಯಾ ಮೂಲಕ ಪಾಟಲಿಪುತ್ರ ಮತ್ತು ಗೋರಖ್‌ಪುರ ಮಾರ್ಗದಲ್ಲಿ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಾರಂಭಿಸಲಾಗುತ್ತಿದೆ ಎಂದು ಹೇಳಲಾಗಿದೆ.






 

 

ಅಲ್ಲದೇ ʻಮೇಕ್ ಇನ್ ಇಂಡಿಯಾ – ಮೇಕ್ ಫಾರ್ ದಿ ವರ್ಲ್ಡ್ʼ ಎಂಬ ಧ್ಯೇಯದೊಂದಿಗೆ ಪ್ರಧಾನಿ ಮೋದಿ ಗಿನಿಯಾ ಗಣರಾಜ್ಯಕ್ಕೆ ರಫ್ತು ಮಾಡಲು ಮಾರ್ಹೌರಾ ಸ್ಥಾವರದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಲೋಕೋಮೋಟಿವ್ ಸಹ ಉದ್ಘಾಟಿಸಲಿದ್ದಾರೆ. ಜೊತೆಗೆ ಗಂಗಾ ನದಿ ಸಂರಕ್ಷಣೆ ಮತ್ತು ಪುನರುಜ್ಜೀವನಗೊಳಿಸುವ ಉದ್ದೇಶದಿಂದ 1,800 ಕೋಟಿ ರೂ.ಗಿಂತಲೂ ಅಧಿಕ ವೆಚ್ಚದ ʻನಯಾಮಿ ಗಂಗೆʼ ಯೋಜನೆ ಅಡಿಯಲ್ಲಿ 6 ಒಳಚರಂಡಿ ಸಂಸ್ಕರಣಾ ಘಟಕಗಳನ್ನೂ ಉದ್ಘಾಟಿಸಲಿದ್ದಾರೆ.

error: Content is protected !!
Scroll to Top