ಇಸ್ರೇಲ್ ಮೈಕ್ರೋಸಾಫ್ಟ್ ಕಛೇರಿಗೆ ಕ್ಷಿಪಣಿ ದಾಳಿ ನಡೆಸಿದ ಇರಾನ್..!

(ನ್ಯೂಸ್ ಕಡಬ) newskadaba.com ಜೂ. 20. ಇಸ್ರೇಲ್‌ ನ ಮೈಕ್ರೋಸಾಫ್ಟ್ ಕಚೇರಿಗೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಮೈಕ್ರೋಸಾಫ್ಟ್ ತಂತ್ರಜ್ಞಾನ ಉದ್ಯಾನವನ ಹಾನಿಯಾಗಿ ಬೆಂಕಿ ಕಾಣಿಸಿಕೊಂಡಿರುವ ಕುರಿತು ದಕ್ಷಿಣ ಇಸ್ರೇಲ್‌ನ ಬಿಯರ್ ಶೆವಾ ನಗರದಿಂದ ವರದಿಯಾಗಿದೆ.

 

ಇರಾನ್‌ ನ ಕ್ಷಿಪಣಿಯನ್ನು ಇಸ್ರೇಲ್‌ ತಡೆಗಟ್ಟಿದ ನಂತರ ಅಗ್ನಿಶಾಮಕ ಸಿಬ್ಬಂದಿ ಮೈಕ್ರೋಸಾಫ್ಟ್ ತಂತ್ರಜ್ಞಾನ ಉದ್ಯಾನವನ ಬೆಂಕಿ ನಂದಿಸಲು ಹರಸಾಹಸ ಪಟ್ಟಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ಇಸ್ರೇಲ್ ಪೊಲೀಸರು ಸ್ಫೋಟಕ ಸಾಮಗ್ರಿಗಳು ಆಸ್ತಿಗೆ ಹಾನಿ ಮಾಡಿವೆ ಎಂದು ತಿಳಿಸಿದ್ದಾರೆ. ಆದರೆ ಪ್ರಾಣಹಾನಿ ವರದಿಯಾಗಿಲ್ಲ.

 

Scroll to Top