(ನ್ಯೂಸ್ ಕಡಬ) newskadaba.com ಜೂ. 20. ಜೂನ್ 21ರಿಂದ ಜುಲೈ 15ರ ವರೆಗೆ ಹದಿನಾರು ಅಂತರರಾಷ್ಟ್ರೀಯ ವಾಯುಮಾರ್ಗಗಳಲ್ಲಿ ವಿಮಾನ ಸಂಚಾರವನ್ನು ಕಡಿತಗೊಳಿಸುವುದಾಗಿ ಏರ್ ಇಂಡಿಯಾ ಪ್ರಕಟಿಸಿದೆ.
ಜೂನ್ 12ರ ಅಹ್ಮದಾಬಾದ್ ದುರಂತದ ಬಳಿಕ ಟಾಟಾ ಮಾಲೀಕತ್ವದ ಏರ್ ಇಂಡಿಯಾದ ಹಲವು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದೆ. ವೇಳಾಪಟ್ಟಿಯ ಸ್ಥಿರತೆಯನ್ನು ಪುನಃಸ್ಥಾಪಿಸುವ ಮತ್ತು ಕೊನೆಕ್ಷಣದಲ್ಲಿ ಪ್ರಯಾಣಿಕರಿಗೆ ಆಗುವ ಅನಾನುಕೂಲತೆಗಳನ್ನು ಕಡಿಮೆ ಮಾಡುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಜೂನ್ 21ರಿಂದ ಈ ನಿರ್ಬಂಧಗಳು ಜಾರಿಯಾಗಲಿದ್ದು, ಜುಲೈ 15ರವರೆಗೆ ಇರುತ್ತವೆ.










