ಟಿ20 ವಿಶ್ವಕಪ್- ಯುಎಇಗೆ ಪ್ರಯಾಣ ಬೆಳೆಸಿದ ಟೀಂ ಇಂಡಿಯಾ

(ನ್ಯೂಸ್ ಕಡಬ) newskadaba.com ಸೆ. 26. ಮಹಿಳೆಯರ ಟಿ20 ವಿಶ್ವಕಪ್ ಬರುವ ಅಕ್ಟೋಬರ್ 3 ರಿಂದ ಪ್ರಾರಂಭಗೊಳ್ಳಲಿದ್ದು, ಹೀಗಾಗಿ ಟೂರ್ನಿಯಲ್ಲಿ ಭಾಗವಹಿಸಲು ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತೀಯ ಮಹಿಳಾ ತಂಡ ಯುಎಇಗೆ ಪ್ರಯಾಣ ಬೆಳೆಸಿದೆ. ಪಂದ್ಯಾವಳಿಯನ್ನು ಬಾಂಗ್ಲಾದೇಶದಿಂದ ಯುಎಇ ಗೆ ಸ್ಥಳಾಂತರಿಸಲಾಗಿದೆ.

ಯುಎಇಗೆ ತೆರಳುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್, ಟೀಂ ಇಂಡಿಯಾ ಈ ಬಾರಿ ಪ್ರಶಸ್ತಿ ಗೆಲ್ಲುವ ಪ್ರಬಲ ಸ್ಪರ್ಧಿಗಳಲ್ಲಿ ಒಂದಾಗಿದ್ದು, ಈ ಬಾರಿ ವಿಶ್ವಕಪ್ ಗೆಲ್ಲಲು ನಮಗೆ ಉತ್ತಮ ಅವಕಾಶವಿದೆ. ನಾವು ಆಸ್ಟ್ರೇಲಿಯಾವನ್ನೂ ಸೋಲಿಸುವ ಸಾಮರ್ಥ್ಯ ಹೊಂದಿದ್ದೇವೆ ಎಂದಿದ್ದಾರೆ. ಟೀಂ ಇಂಡಿಯಾ ಯುಎಇಗೆ ತೆರಳುತ್ತಿರುವ ಫೋಟೋವನ್ನು ಬಿಸಿಸಿಐ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

Scroll to Top