ದೀಪಾವಳಿ ಸಂಭ್ರಮದ ಬಳಿಕ ಯುಪಿಐ MDR ಶುಲ್ಕ ಜಾರಿ

(ನ್ಯೂಸ್‌ ಕಡಬ) newskadaba.com, ಅ.13. ಯುಪಿಐ ವಹಿವಾಟುಗಳ ಮೇಲಿನ ಶುಲ್ಕ ವಿಧಿಸುವ ಪ್ರಕ್ರಿಯೆಯನ್ನು ನವೆಂಬರ್ ಎರಡನೇ ವಾರಕ್ಕೆ ಮುಂದೂಡಲಾಗಿದೆ.

ಈ ಎಂಡಿಆರ್ ಶುಲ್ಕವನ್ನು ಕೇವಲ ವ್ಯಾಪಾರಿಗಳು ಮಾತ್ರ ಭರಿಸಬೇಕು. ಸಾಮಾನ್ಯ ಗ್ರಾಹಕರಿಗೆ ಹಣ ಪಾವತಿಸುವಾಗ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ ಹಾಗೂ ಸ್ನೇಹಿತರು-ಕುಟುಂಬಕ್ಕೆ ಹಣ ಕಳುಹಿಸುವುದು ಸಂಪೂರ್ಣ ಉಚಿತ.ತಿಂಗಳಿಗೆ 1 ಲಕ್ಷ ರೂ.ವರೆಗೆ ಯುಪಿಐ ಕ್ಯೂಆರ್ ಕೋಡ್ ಮೂಲಕ ಆದಾಯ ಪಡೆಯುವ ಸಣ್ಣ ವ್ಯಾಪಾರಿಗಳಿಗೆ ಈ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

2,000 ರೂ. ವರೆಗಿನ ವಹಿವಾಟಿಗೆ ಯಾವುದೇ ಶುಲ್ಕವಿಲ್ಲ. 2,000 ರೂ. ಗಿಂತ ಹೆಚ್ಚಿನ ವ್ಯಾಪಾರಿ ಪಾವತಿಗಳಿಗೆ (P2M) ಶೇಕಡಾ 0.4 ರಷ್ಟು MDR ಅನ್ವಯಿಸುತ್ತದೆ (ಗರಿಷ್ಠ ಮಿತಿ 300 ರೂ.). ರೈಲ್ವೆ, ಟೆಲಿಕಾಂ, ಇಂಧನ ಇತ್ಯಾದಿಗಳಿಗೆ 2,000 ರೂ. ದಾಟಿದರೆ 5 ರೂ. ಸ್ಥಿರ ಶುಲ್ಕವಿರುತ್ತದೆ.

Scroll to Top