IPS ಅಧಿಕಾರಿ ವಿರುದ್ಧ ಯುವತಿಗೆ ಕಿರುಕುಳ ಆರೋಪ..! – ವಿಡಿಯೋ ವೈರಲ್

(ನ್ಯೂಸ್ ಕಡಬ)newskadaba.com ಗೋವಾ, ಆ.11. ಪಬ್‌ ನಲ್ಲಿ ಯುವತಿಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ, ಗೋವಾಕ್ಕೆ ನಿಯೋಜಿಸಲಾದ ಐಪಿಎಸ್ ಅಧಿಕಾರಿ ಕೋನ್ ಅವರನ್ನು ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಹುದ್ದೆಯಿಂದ ವಜಾಗೊಳಿಸಲಾಗಿದೆ. ಐಪಿಎಸ್ ಅಧಿಕಾರಿ ಕೋನ್ ಗೋವಾದ ಬಾರ್‌ ನಲ್ಲಿ ಮಹಿಳೆಯೊಬ್ಬರನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.


ಆರೋಪಿತ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಡಿಐಜಿ ಮಹಿಳೆಯೊಂದಿಗೆ ಜಗಳವಾಡುತ್ತಿರುವುದು ಸೆರೆಯಾಗಿದೆ.

Scroll to Top