ಭಾರತೀಯ ನೌಕಾಪಡೆಯ ನಾವಿಕನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ



(ನ್ಯೂಸ್ ಕಡಬ)newskadaba.com ಕೊಚ್ಚಿ, ಜು.28. ಭಾರತೀಯ ನೌಕಾಪಡೆಯ 19 ವರ್ಷದ ನಾವಿಕನೊಬ್ಬನ ಮೃತದೇಹ INS ವಿಕ್ರಾಂತ್ ಹಡಗಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೊಚ್ಚಿಯಲ್ಲಿ ನಡೆದಿದೆ.








ಪ್ರಸ್ತುತ ನೌಕೆಯನ್ನು ಕೊಚ್ಚಿ ಕರಾವಳಿಯಲ್ಲಿ ನಿಲ್ಲಿಸಲಾಗಿದೆ. ಘಟನೆಯ ಕುರಿತು ತನಿಖಾ ಮಂಡಳಿಗೆ ಆದೇಶಿಸಲಾಗಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಹೇಳಿದ್ದು, ನಾವಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ನಾವಿಕ ಬಿಹಾರದ ಮುಜಾಫರ್ ಪುರದ ಮೂಲದವರಾಗಿದ್ದು, ಸಾಮಾನ್ಯ ಕೇಡರ್ ಆಗಿದ್ದು, ಕೇಂದ್ರದ ಅಗ್ನಿವೀರ್ ಯೋಜನೆಯ ಮೂಲಕ ನೇಮಕಗೊಂಡಿಲ್ಲ ಎಂದು ವರದಿಯಾಗಿದೆ.






error: Content is protected !!
Scroll to Top