ಮಸೀದಿ ಸ್ಫೋಟದ ಅಪರಾಧಿ ಸೇರಿ ಐವರಿಗೆ ಗಲ್ಲು ಶಿಕ್ಷೆ  

(ನ್ಯೂಸ್ ಕಡಬ)newskadaba.com ದುಬೈ, ಜು.28. ‘2015ರಲ್ಲಿ ನಡೆದಿದ್ದ ಮಸೀದಿ ಸ್ಫೋಟ ಪ್ರಕರಣದ ಅಪರಾಧಿ ಸೇರಿದಂತೆ ಐವರನ್ನು ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗಿದೆ’ ಎಂದು ಪಬ್ಲಿಕ್‌ ಪ್ರಾಸಿಕ್ಯೂಷನ್‌ ತಿಳಿಸಿದೆ.

ಸ್ಫೋಟದಲ್ಲಿ 27 ಮಂದಿ ಮೃತಪಟ್ಟಿದ್ದರು ಎನ್ನಲಾಗಿದೆ. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆ ಹೊತ್ತುಕೊಂಡಿತ್ತು ಎನ್ನಲಾಗಿದೆ.

‘ಈ ಐವರಲ್ಲಿ ಮಸೀದಿ ದಾಳಿಯಲ್ಲಿ ಶಿಕ್ಷೆಗೊಳಗಾದ ಅಬ್ದುಲ್ ರಹ್ಮಾನ್ ಸಬಾ ಇದಾನ್‌, ಕೊಲೆ ಶಿಕ್ಷೆಗೊಳಗಾದ ಮೂವರು ಮತ್ತು ಮಾದಕ ವಸ್ತು ಕಳ್ಳಸಾಗಣೆ ಅಪರಾಧಿಯಾದ ಶ್ರೀಲಂಕಾದ ವ್ಯಕ್ತಿ ಸೇರಿದ್ದಾರೆ’ ಎಂದು ಪಬ್ಲಿಕ್‌ ಪ್ರಾಸಿಕ್ಯೂಷನ್‌ ಹೇಳಿಕೆ ತಿಳಿಸಿದೆ.

 

 

Scroll to Top