ಆಕಸ್ಮಿಕವಾಗಿ ಬಾವಿಗೆ ಕಾಲುಜಾರಿ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ)newskadaba.com ಕಾಸರಗೋಡು, ಜು.28. ಆವರಣ ಇಲ್ಲದ ಬಾವಿಗೆ ಬಿದ್ದು ಪಾಕತಜ್ಞರೋರ್ವರು ಮೃತಪಟ್ಟ ಘಟನೆ ಪೆರ್ಲ ಸಮೀಪದ ಕಾಟುಕುಕ್ಕೆ ಕುಡ್ತಡ್ಕದಲ್ಲಿ ನಡೆದಿದೆ. ಮೃತಪಟ್ಟವರನ್ನು ಜನಾರ್ಧನ ನಾಯಕ್(42 ) ಎಂದು ಗುರುತಿಸಲಾಗಿದೆ.


ಮನೆ ಸಮೀಪದ ಬಾವಿಗೆ ಬಿದ್ದು ಈ ದುರ್ಘಟನೆ ನಡೆದಿದ್ದು, ನೀರು ಸೇದಲು ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಆಕಸ್ಮಿಕ ವಾಗಿ ಬಿದ್ದಿರಬಹುದೆಂದು ಶಂಕಿಸಲಾಗಿದೆ. ತವರು ಮನೆಗೆ ತೆರಳಿದ್ದ ಪತ್ನಿ ಮತ್ತು ಮಗು ಸಂಜೆ ಮನೆಗೆ ಬಂದಾಗ ಜನಾರ್ಧನ ನಾಪತ್ತೆಯಾಗಿದ್ದು, ಪರಿಸರ ವಾಸಿಗಳಿಗೆ ಮಾಹಿತಿ ನೀಡಿದ್ದರು. ಗಮನಿಸಿದಾಗ ಬಾವಿಗೆ ಬಿದ್ದಿರುವುದು ಪತ್ತೆಯಾಗಿದೆ.

Scroll to Top