
(ನ್ಯೂಸ್ ಕಡಬ) newskadaba.com, ಅ .28 . ಆಪರೇಷನ್ ಸಿಂಧೂರ ಬಳಿಕ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ನಡೆಯಲಿರುವ ಎಸ್ಸಿಒ ಸಭೆಗೆ ಪಾಕಿಸ್ತಾನಕ್ಕೆ ಭಾರತ ಆಹ್ವಾನ ನೀಡಿದೆ.
ನವದೆಹಲಿಯಲ್ಲಿ ನವೆಂಬರ್ 20ರಿಂದ 22ರ ವರೆಗೆ ನಾಗರಿಕತೆಗಳ ಸಂವಾದ ವೇದಿಕೆಗೆ ಎಸ್ಸಿಒನ ಎಲ್ಲ 10 ಸದಸ್ಯ ರಾಷ್ಟ್ರಗಳಿಗೂ ಆಹ್ವಾನ ನೀಡಲಾಗಿದೆ. ಪಾಕಿಸ್ತಾನದ ರಾಷ್ಟ್ರೀಯ ಪರಂಪರೆ ಮತ್ತು ಸಂಸ್ಕೃತಿ ಸಚಿವ ಔರಂಗಜೇಬ್ ಖಾನ್ ಖಿಚ್ಚಿ ಅವರಿಗೂ ಭಾರತ ಆಹ್ವಾನ ಕೊಟ್ಟಿದೆ. ಆಪರೇಷನ್ ಸಿಂಧೂರ ಬಳಿಕ ಪಾಕಿಸ್ತಾನದ ಹಿರಿಯ ಸಚಿವರಿಗೆ ಸ್ವಾಗತ ನೀಡಲಾಗಿದೆ.
ನಾಗರಿಕತೆಗಳ ಸಂವಾದ ವೇದಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದರು. ಸಂಸ್ಕೃತಿ, ಪರಂಪರೆ ಮತ್ತು ಜನರ ನಡುವಿನ ಬಾಂಧವ್ಯ ಬಲಪಡಿಸುವ ಉದ್ದೇಶ ಹೊಂದಲಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ ಮುಂದುವರಿದಿರುವ ನಡುವೆಯೇ ಮಹತ್ವದ ಬೆಳವಣಿಗೆ ನಡೆದಿದೆ. ಸಭೆಯಲ್ಲಿ ಪಾಕಿಸ್ತಾನ ಭಾಗವಹಿಸುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಪ್ರಕಟವಾಗಿಲ್ಲ.




