ಒಡಿಶಾದ ಮತ್ತೊಂದು ಜಿಲ್ಲೆಯಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು- ತಪ್ಪಿದ ಅನಾಹುತ ➤ ಬಾಲಸೋರ್ ಭೀಕರ ದುರಂತದ ಬೆನ್ನಲ್ಲೇ ಘಟನೆ

(ನ್ಯೂಸ್ ಕಡಬ) newskadaba.com ಒಡಿಶಾ, ಜೂ. 05. ಕಳೆದ ವಾರ ನಡೆದ ಭೀಕರ ರೈಲು ದುರಂತದ ದುಃಖ ಮಾಸುವ ಮುನ್ನವೇ ಬಾರ್ಗಢ ಜಿಲ್ಲೆಯ ಮೆಂಧಪಾಲಿ ಬಳಿ ಗೂಡ್ಸ್ ರೈಲಿನ ಐದು ಬೋಗಿಗಳು ಹಳಿತಪ್ಪಿದ ಘಟನೆ ವರದಿಯಾಗಿದೆ.

ವರದಿಯ ಪ್ರಕಾರ, ಸುಣ್ಣದಕಲ್ಲು ಸಾಗಿಸುತ್ತಿದ್ದ ಗೂಡ್ಸ್ ರೈಲಿನ ಹಲವಾರು ವ್ಯಾಗನ್‌ಗಳು ಬರ್ಗರ್‌ನಲ್ಲಿ ಹಳಿತಪ್ಪಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಘಟನಾ ಸ್ಥಳಕ್ಕೆ ಈಗಾಗಲೇ ಪೊಲೀಸರು ಧಾವಿಸಿದ್ದು, ತನಿಖೆ ಆರಂಭಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Scroll to Top