ಯೂಟ್ಯೂಬ್ ವಿಡಿಯೋ ಲೈಕ್ ಮಾಡಿ 24 ಲಕ್ಷ ರೂ. ಕಳೆದುಕೊಂಡ ಯುವತಿ..!

(ನ್ಯೂಸ್ ಕಡಬ)newskadaba.com ಮುಂಬೈ, ಏ.28. ಆನ್‌ಲೈನ್‌ ನಲ್ಲಿ ಹಣ ವಂಚನೆಯ ಹಲವು ಪ್ರಕರಣಗಳು ವರದಿಯಾಗುತ್ತಲೇ ಇದೆ. ಇದೀಗ ಪುಣೆಯ ಯುವತಿಯೊಬ್ಬಳು ಇಂತಹ ವಂಚನೆಗೆ ಬಲಿಯಾದ ಘಟನೆ ನಡೆದಿದೆ.


ಆನ್‌ಲೈನ್ ವಂಚನೆಯಿಂದ ಯುವತಿ ಬರೋಬ್ಬರಿ 24 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಕಂಪೆನಿಯೊಂದು ಯೂಟ್ಯೂಬ್ ವಿಡಿಯೋ ಗಳನ್ನು ಲೈಕ್ ಮಾಡುವ ಕೆಲಸ ನೀಡಿ ಯುವತಿಯಿಂದ ಲಕ್ಷ ಗಟ್ಟಲೆ ಹಣ ವಸೂಲಿ ಮಾಡಿದೆ. ವಂಚನೆಗೊಳಗಾದ ಯುವತಿ ನೇತ್ರ ತಜ್ಞೆಯಾಗಿದ್ದು, ವರ್ಕ್ ಫ್ರಂ ಹೋಮ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಆನ್ಲೈನ್ ಕಂಪೆನಿಯೊಂದನ್ನು ಸಂಪರ್ಕಿಸಿದ್ದಾರೆ.

Scroll to Top