ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ತಮ್ಮನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಅಕ್ಕ..!!



(ನ್ಯೂಸ್ ಕಡಬ)Newskadaba.com ,ಏ.07   ತಮ್ಮನ ಸಾವಿನ ನೋವಿನ ಮಧ್ಯೆಯೂ ವಿದ್ಯಾರ್ಥಿನಿಯೊಬ್ಬಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿರುವ ಘಟನೆ  ನಡೆದಿದೆ.ವಿದ್ಯಾರ್ಥಿನಿ ಕೀರ್ತನಾ ಪ್ರಶಾಂತ ಊರಿನ ಸರ್ಕಾರಿ ಪ್ರೌಢಶಾಲೆ ಕೇಂದ್ರದಲ್ಲಿ  ಇಂಗ್ಲಿಷ್ ಪರೀಕ್ಷೆ ಬರೆದಿದ್ದಾಳೆ.







ಏಕೈಕ ಸಹೋದರ 7ನೇ ತರಗತಿ ಪರೀಕ್ಷೆ ಬರೆದಿದ್ದ ಕಾರ್ತಿಕ  ರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ತಮ್ಮನ ಸಾವಿನ ದುಃಖದಲ್ಲಿದ್ದ ಈಕೆ ಪರೀಕ್ಷೆ ಬರೆಯಲು ನಿರಾಕರಿಸಿದ್ದಳು. ಬೆಳಗ್ಗೆ ವಿಷಯ ಗೊತ್ತಾಗುತ್ತಿದ್ದಂತೆ ಪರೀಕ್ಷಾ ಕೇಂದ್ರದ ಮುಖ್ಯಸ್ಥ ಸುರೇಶ ಕಟ್ಟಿಮನಿ, ಕಸ್ಟೋಡಿಯನ್ ಮಲ್ಲಪ್ಪ ಜಿಗಜೀವಣಿ ಬಾಲಕಿ ತಂದೆ ಸೇರಿ ಸಂಬಂಧಿಕರ ಮನವೊಲಿಸಿದರ ಫಲವಾಗಿ ದುಃಖದ ಮಧ್ಯೆಯೂ ಕೀರ್ತನಾ ಪರೀಕ್ಷೆ ಬರೆದ ನಂತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದಳು.






 

 

 

error: Content is protected !!
Scroll to Top