ಡಾಬಾ ಫ್ರಿಡ್ಜ್‌ನೊಳಗೆ ಬಾಲಕಿ ಮೃತದೇಹ ಪತ್ತೆ      ➤  ಆರೋಪಿ ಅರೆಸ್ಟ್.!

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.15. ಸಂಬಂಧ ಮುರಿದುಕೊಂಡು ಬೇರೆ ಮದುವೆಯಾಗಲೆತ್ನಿಸಿದನ್ನು ಪ್ರಶ್ನಿಸಿದ ಬಾಲಕಿಯನ್ನು ಪ್ರೇಮಿಯೊಬ್ಬ ಕತ್ತು ಹಿಸುಕಿ ಕೊಲೆಗೈದು ಡಾಬಾದ ರೆಫ್ರಿಜರೇಟರ್‌ನಲ್ಲಿಟ್ಟ ಘಟನೆ ದೆಹಲಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ದೆಹಲಿಯ ಉತ್ತಮ್‌ನಗರದ ಡಾಬಾದಲ್ಲಿರಿಸಲಾಗಿದ್ದ ರೆಫ್ರಿಜರೇಟರ್‌ನಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿದ್ದು, ಆರೋಪಿ ಸಾಹಿಲ್ ಗೆಹ್ಲೋಟ್ (26)ನನ್ನು ಬಂಧಿಸಲಾಗಿದೆ. ಸಾಹಿಲ್ ಮತ್ತು ಬಾಲಕಿ ಕಳೆದೈದು ವರ್ಷಗಳಿಂದ ಪ್ರೀತಿಯಲ್ಲಿದ್ದರು.

Scroll to Top