ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
➤ ನಿರ್ಮಾಣ ಹಂತದಲ್ಲಿರುವ ಕಟ್ಟಡದ 42ನೇ ಮಹಡಿಯಿಂದ ಕಲ್ಲು ಬಿದ್ದು, ಇಬ್ಬರು ಸಾವು! – News Kadaba

➤ ನಿರ್ಮಾಣ ಹಂತದಲ್ಲಿರುವ ಕಟ್ಟಡದ 42ನೇ ಮಹಡಿಯಿಂದ ಕಲ್ಲು ಬಿದ್ದು, ಇಬ್ಬರು ಸಾವು!

(ನ್ಯೂಸ್ ಕಡಬ) newskadaba.com. ಮುಂಬೈ, ಫೆ.15. ನಿರ್ಮಾಣ ಹಂತದಲ್ಲಿರುವ ಕಟ್ಟಡದ 42ನೇ ಮಹಡಿಯಿಂದ ಬೃಹತ್ ಕಲ್ಲೊಂದು ಕೆಳಗೆ ಬಿದ್ದು, ಇಬ್ಬರು ಮೃತಪಟ್ಟಿರುವ ಘಟನೆ ಮುಂಬೈನ ವರ್ಲಿ ಪ್ರದೇಶದಲ್ಲಿ ಸಂಭವಿಸಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳು ಈ ದೊಡ್ಡ ಕಲ್ಲು ಬಿದ್ದು ಜಖಂಗೊಂಡಿದೆ. ಜನವರಿ 9 ರಂದು ವರ್ಲಿ ಪ್ರದೇಶದಲ್ಲಿ ಲಿಫ್ಟ್​ನಲ್ಲಿ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದರು.

ಇನ್ನು ಬೆಂಗಳೂರಿನಲ್ಲು ಕೂಡ ಇಂಥದ್ದೇ ಘಟನೆ ವರದಿಯಾಗಿತ್ತು, ನಿರ್ಮಾಣ ಹಂತದಲ್ಲಿರುವ ಮೆಟ್ರೋ ಪಿಲ್ಲರ್ ಬಿದ್ದು, ತಾಯಿ ಮಗಳು ಸಾವನ್ನಪ್ಪಿದ್ದರು. ಮಹಾರಾಷ್ಟ್ರದ ಮುಂಬೈನಲ್ಲಿ ನಿರ್ಮಾಣ ಹಂತದ ಬಹುಮಹಡಿ ಕಟ್ಟಡದಿಂದ ಕಲ್ಲು ಬಿದ್ದು ರಸ್ತೆಯಲ್ಲಿ ಹೋಗುತ್ತಿದ್ದ ಸಬೀರ್ ಅಲಿ (36) ಮತ್ತು ಇಮ್ರಾನ್ ಅಲಿ (30) ಗಾಯಗೊಂಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಆಂಬ್ಯುಲೆನ್ಸ್ ಅವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಿತ್ತು, ಆದರೆ ಅವರು ಬದುಕುಳಿಯಲಿಲ್ಲ.

Scroll to Top