ಚಿತ್ರೀಕರಣ ವೇಳೆ ಅಪಘಾತ ➤ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಆಸ್ಪತ್ರೆಗೆ ದಾಖಲು..!!



(ನ್ಯೂಸ್ ಕಡಬ)newskadaba.com ಜ.07. ಬಾಲಿವುಡ್ ಸ್ಟಾರ್ ನಿರ್ದೇಶಕ,  ಕರ್ನಾಟಕ ಮೂಲದ ರೋಹಿತ್ ಶೆಟ್ಟಿ ಶೂಟಿಂಗ್ ವೇಳೆ ತೀವ್ರ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.







ರೋಹಿತ್ ಶೆಟ್ಟಿ ಸದ್ಯ ಇಂಡಿಯನ್ ಪೊಲೀಸ್ ಫೋರ್ಸ್ ವೆಬ್ ಸರಣಿ ನಿರ್ದೇಶನ ಮಾಡುತ್ತಿದ್ದಾರೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇಂಡಿಯನ್ ಪೊಲೀಸ್ ಫೋರ್ಸ್ ವೆಬ್ ಸರಣಿ ಚಿತ್ರೀಕರಣ ನಡೆಯುತ್ತಿದೆ. ಈ ಸರಣಿಯ ಚೇಸಿಂಗ್ ದೃಶ್ಯದ ಚಿತ್ರೀಕರಣ ನಡೆಯುತ್ತಿದ್ದು ಆಗ ರೋಹಿತ್ ಶೆಟ್ಟಿ ಅವರಿಗೆ ತೀವ್ರ ಏಟಾಗಿದೆ ಎನ್ನಲಾಗಿದೆ. ತಕ್ಷಣ ಅವರನ್ನು ಸಮೀಪದ ಕಾಮಿನೇನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ರೋಹಿತ್ ಶೆಟ್ಟಿ ಚೇತರಿಸಿಕೊಳ್ಳುತ್ತಿದ್ದಾರೆ ಆತಂಕ ಪಡಬೇಕಾಗಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.






 

error: Content is protected !!
Scroll to Top