ಬಂದೂಕುಧಾರಿಗಳಿಂದ ಜೈಲಿನ ಮೇಲೆ ಗುಂಡಿನ ದಾಳಿ ➤ ಸಿಬ್ಬಂದಿಗಳು ಸೇರಿ 14 ಜನರು ಮೃತ್ಯು

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 02. ಬಂದೂಕುಧಾರಿಗಳು ಜೈಲಿನ ಮೇಲೆ ಗುಂಡಿನ ದಾಳಿ ಮಾಡಿ 14 ಜನರನ್ನು ಹತ್ಯೆಗೈದಿರುವ ಘಟನೆ ಮೆಕ್ಸಿಕೋದ ಜುವಾರೆಜ್ ನಲ್ಲಿ ವರದಿಯಾಗಿದೆ.

ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ವಾಹನದಲ್ಲಿ ಬಂದ ವ್ಯಕ್ತಿಗಳು ಜೈಲಿನ ಮೇಲೆ ಗುಂಡು ಹಾರಿಸಿದ್ದು, ಈ ವೇಳೆ ಕೈದಿಗಳು ಹಾಗೂ ಭದ್ರತಾ ಸಿಬ್ಬಂದಿಗಳು ದಾಳಿಯಿಂದ ತಪ್ಪಿಸಿಕೊಳ್ಳಲು ಓಡುವ ಭರದಲ್ಲಿ 10 ಮಂದಿ ಸಿಬ್ಬಂದಿಗಳು ಹಾಗೂ ನಾಲ್ವರು ಕೈದಿಗಳು ಮೃತಪಟ್ಟಿದ್ದು, 24 ಮಂದಿ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನಾಲ್ವರನ್ನು ಪೊಲೀಸರು ಸೆರೆ ಹಿಡಿದಿದ್ದು, ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Scroll to Top