ಅಂಬಾನಿ ಮಗನನ್ನು ವರಿಸಲಿರುವ ರಾಧಿಕಾ ಮರ್ಚೆಂಟ್



(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 30.  ರಿಲಾಯನ್ಸ್‌ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್‌ ಅಂಬಾನಿ ಹಾಗೂ ನೀತಾ ಅಂಬಾನಿಯ ಸೊಸೆಯಾಗಲಿರುವ ರಾಧಿಕಾ ಮರ್ಚೆಂಟ್‌ ಇತ್ತೀಚಿಗೆ ಭಾರೀ ಸುದ್ದಿಯಲ್ಲಿದ್ದಾರೆ. ಅಂಬಾನಿ ಮನೆತನದ ಸೊಸೆಯಾಗಲಿದ್ದಾರೆ ಎಂಬ ಕಾರಣಕ್ಕಾಗಿಯೇ ರಾಧಿಕಾ ಮರ್ಚೆಂಟ್‌ ಹೆಚ್ಚು ಮನೆಮಾತಾಗಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಅವರ ಸಂಬಂಧದ ವದಂತಿಗಳು ಮೊದಲು ಹುಟ್ಟಿಕೊಂಡಿದ್ದು, ಅವರ ಒಂದೆರಡು ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಸದ್ಯದಲ್ಲೇ ರಾಧಿಕಾ ಮರ್ಚೆಂಟ್ ಅಂಬಾನಿ ಮನೆತನದ ಸೊಸೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.







 

error: Content is protected !!
Scroll to Top