ಚರಂಡಿಗೆ ಬಿದ್ದು ಬಾಲಕಿಯರಿಬ್ಬರು ಮೃತ್ಯು..!

(ನ್ಯೂಸ್ ಕಡಬ) newskadaba.com ಶಾಜಾಪುರ, ಫೆ. 02. ಆಕಸ್ಮಿಕವಾಗಿ ಕೆರೆಗೆ ಬಿದ್ದು ಇಬ್ಬರು ಬಾಲಕಿಯರು ಮೃತಪಟ್ಟ ದಾರುಣ ಘಟನೆ ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಆಲಾ ಉಮ್ರೋಡ್ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕಿಯರನ್ನು ಪೂನಂ (7) ಮತ್ತು ಸಹೋದರಿ ಆಯುಷಿ (5) ಎಂದು ಗುರುತಿಸಲಾಗಿದೆ. ಆಯುಷಿ ಎಂಬಾಕೆ ಆಟವಾಡುತ್ತಿದ್ದ ವೇಳೆ ಚರಂಡಿಗೆ ಬಿದ್ದಿದ್ದು, ಇದನ್ನು ಕಂಡ ಸಹೋದರಿ ಪೂನಂ ಚರಂಡಿಗೆ ಹಾರಿ ರಕ್ಷಿಸಲು ಯತ್ನಿಸಿದ್ದಾಳೆ‌. ಈ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Scroll to Top