ಎಡಪಕ್ಷ ನಾಯಕ ಸೀತಾರಾಂ ಯೆಚೂರಿಯವರ ಪುತ್ರ ಕೊರೋನಾಗೆ ಬಲಿ

(ನ್ಯೂಸ್ ಕಡಬ) newskadaba.com ನವದೆಹಲಿ, ಎ. 22. ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ಹಿರಿಯ ಮಗ ಆಶಿಶ್ ಎಂಬವರು ಗುರುವಾರದಂದು ನಿಧನರಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಸೀತಾರಾಂ ಯೆಚೂರಿ, ಜೂನ್ 9ರಂದು 35 ನೇ ವರ್ಷಕ್ಕೆ ಕಾಲಿಡಬೇಕಿದ್ದ ಆಶಿಶ್, ಗುರಗಾಂವ್‌ನ ಮೆಡಂತಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದರು. ಎರಡು ವಾರಗಳ ಕೊರೋನಾ ಜೊತೆಗಿನ ಹೋರಾಟದ ಬಳಿಕ ಇಂದು ಮುಂಜಾನೆ 5.30ರ ವೇಳೆಗೆ ಹಠಾತ್ ಮರಣವನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

Scroll to Top