ಮನೆಯ 4ನೇ ಮಹಡಿಯಿಂದ ಬಿದ್ದು ಮುತ್ತೂಟ್ ಸಮೂಹದ ಅಧ್ಯಕ್ಷ ಎಂ.ಜಿ ಜಾರ್ಜ್ ನಿಧನ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಮಾ. 07. ಮುತ್ತೂಟ್ ಸಮೂಹದ ಅಧ್ಯಕ್ಷ ಎಂ.ಜಿ. ಜಾರ್ಜ್ ಮುತ್ತೋಟ್ (71) ರವರು ತನ್ನ ಮನೆಯ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಎಂ.ಜಿ. ಜಾರ್ಜ್ ಮುತ್ತೂಟ್ ಅವರು ಪೂರ್ವ ದಿಲ್ಲಿಯ ಕೈಲಾಸ್ ನಲ್ಲಿರುವ ತನ್ನ ಮನೆಯ 4ನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಯ ವೇಳೆ ಅವರು ಮೃತಪಟ್ಟಿದ್ದರು.

Scroll to Top