(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 07. ಆಕಸ್ಮಿಕವಾಗಿ ಕೆರೆಗೆ ಬಿದ್ದು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಬೆಟ್ಟಂಪಾಡಿ ಸಮೀಪದ ಗಮ್ಮಟಗದ್ದೆ ಎಂಬಲ್ಲಿ ನಡೆದಿದೆ.

ಮೃತರನ್ನು ಪವನ್ (22) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಮನೆ ಸಮೀಪದಲ್ಲಿ ನಡೆಯುತ್ತಿದ್ದ ನೇಮಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಪವನ್ ಬೆಳಗಾದರೂ ಮನೆಗೆ ಹಿಂದಿರುಗದೇ ಇದ್ದು, ಅನುಮಾನಗೊಂಡ ಮನೆಯವರು ಹುಡುಕಾಟ ನಡೆಸಿದಾಗ ಮನೆ ಸಮೀಪದ ಕೆರೆಯೊಂದರಲ್ಲಿ ಚಪ್ಪಲಿ ತೇಲುತ್ತಿದ್ದುದು ಕಂಡುಬಂದಿದೆ. ಸಂಶಯಗೊಂಡು ಕೆರೆಯಲ್ಲಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ. ಈ ಕುರಿತು ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.










