ಕಾಸರಗೋಡು: ಟಿವಿ ಮೈಮೇಲೆ ಬಿದ್ದು ಎರಡು ವರ್ಷದ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಫೆ. 04. ಟಿವಿ ಮೈಮೇಲೆ ಬಿದ್ದ ಎರಡು ವರ್ಷದ ಮೃತಪಟ್ಟ ಘಟನೆ ಬೋವಿಕಾನ ಎಂಬಲ್ಲಿ ನಡೆದಿದೆ.


ತೆಕ್ಕಿಲ್ ಉಕ್ರಂಪಾಡಿಯ ನಿಸಾರ್ ಹಾಗೂ ಫಾಯಿಝ ದಂಪತಿಯ ಪುತ್ರ ಮುಹಮ್ಮದ್ ಶಾಕಿರ್(2) ಎಂದು ಗುರುತಿಸಲಾಗಿದೆ. ಮಗುವು ಆಟವಾಡುತ್ತಾ ಟಿವಿಯ ಕೇಬಲ್ ವಯ್ ಎಳೆದ ಸಂದರ್ಭ ಸ್ಟ್ಯಾಂಡ್ ಸಹಿತ ಟಿವಿ ಮೈಮೇಲೆ ಬಿದ್ದಿದ್ದು, ಶಬ್ದ ಕೇಳಿ ಮನೆಯವರು ಧಾವಿಸಿ ಬಂದಾಗ ಮಗುವಿನ ಮೇಲೆ ಟಿವಿ ಸ್ಟ್ಯಾಂಡ್ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಮಗು ಕೊನೆಯುಸಿರೆಳೆದಿತ್ತು.

Scroll to Top