(ನ್ಯೂಸ್ ಕಡಬ) newskadaba.com ಜು. 24. ಸ್ಕಾಟ್ ಲ್ಯಾಂಡ್ನ ಗ್ಲಾಸ್ಗೋದಲ್ಲಿ 2026ರ ಕಾಮನ್ ವೆಲ್ತ್ ಕ್ರೀಡಾಕೂಟ (CWG 2026) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ, ಕ್ರೀಡಾಕೂಟದ ಅಧಿಕೃತ ಉದ್ಘಾಟನೆಗೂ ಮುನ್ನವೇ ಭಾರತಕ್ಕೆ ಮೊದಲ ಪದಕ ಖಚಿತವಾಗಿದೆ.
ಒಲಿಂಪಿಕ್ ಪದಕ ವಿಜೇತ ಭಾರತದ ಖ್ಯಾತ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ಮಹಿಳೆಯರ 75 ಕೆಜಿ ವಿಭಾಗದ ಬಾಕ್ಸಿಂಗ್ನಲ್ಲಿ ಭಾರತಕ್ಕೆ ಕನಿಷ್ಠ ಕಂಚಿನ ಪದಕವನ್ನು ಖಾತ್ರಿಪಡಿಸಿದ್ದಾರೆ. ಡ್ರಾ ಪಟ್ಟಿಯಲ್ಲಿ ಲವ್ಲಿನಾ ಅವರಿಗೆ ‘ಬೈ’ ಸಿಕ್ಕಿರುವ ಕಾರಣ, ಅವರು ನೇರವಾಗಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಕಾಮನ್ ವೆಲ್ತ್ ಬಾಕ್ಸಿಂಗ್ ನಿಯಮಗಳ ಪ್ರಕಾರ, ಸೆಮಿಫೈನಲ್ ತಲುಪಿದ ಇಬ್ಬರೂ ಸ್ಪರ್ಧಿಗಳಿಗೆ (ಸೋತರೂ ಸಹ) ಕಂಚಿನ ಪದಕ ನೀಡಲಾಗುತ್ತದೆ. ಹೀಗಾಗಿ ಲವ್ಲಿನಾ ಪಂದ್ಯ ಆಡುವ ಮೊದಲೇ ಪದಕ ಪಕ್ಕಾ ಆಗಿದೆ. ಲವ್ಲಿನಾ ಅವರು ಜುಲೈ 31 ರಂದು ನಡೆಯಲಿರುವ ಸೆಮಿಫೈನಲ್ನಲ್ಲಿ ತಾಫಾಕಿ ಅವರ ವಿರುದ್ಧ ಸೆಣಸಲಿದ್ದಾರೆ. ಈ ಪಂದ್ಯದಲ್ಲಿ ಗೆದ್ದರೆ ಫೈನಲ್ಗೆ ಪ್ರವೇಶಿಸಿ ಚಿನ್ನದ ಪದಕಕ್ಕಾಗಿ ಹೋರಾಡಲಿದ್ದಾರೆ.








