ಮಂಗಳೂರು: ಕಂಪೌಂಡ್ ಗೋಡೆ ಕುಸಿದು ಮೂವರು ದುರ್ಮರಣ



(ನ್ಯೂಸ್ ಕಡಬ) newskadaba.com ಮಂಗಳೂರು, ಜು. 01. ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಕಂಪೌಂಡ್ ಗೋಡೆ ಮನೆಮೇಲೆ ಕುಸಿದು ಬಿದ್ದ ಪರಿಣಾಮ ಮೂವರು ಮೃತಪಟ್ಟ ಘಟನೆ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗರೋಡಿಯ ಮರಿಯಾಲ್ ಹೌಸ್‌ನಲ್ಲಿ ಬುಧವಾರ ಮುಂಜಾನೆ ನಡೆದಿದೆ.







ಮೃತಪಟ್ಟವರನ್ನು ಬಿಹಾರ ಮೂಲದ ಲಾಲ್ ಬಾಬು ಎಂಬವರ ಇಬ್ಬರು ಹೆಣ್ಣು ಮಕ್ಕಳಾದ 7 ವರ್ಷದ ಅನಾಮಿಕ, 3 ವರ್ಷದ ತನು ಹಾಗೂ ಉಡುಪಿ ಮೂಲದ ಬಾಲಕೃಷ್ಣ ಎಂಬವರ ಪತ್ನಿ ಶಾಂತಾ (35 ) ಎಂಸು ಗುರುತಿಸಲಾಗಿದೆ.






ಗಾಯಾಳುಗಳು ಮತ್ತು ಅಸ್ವಸ್ಥರೆಲ್ಲರನ್ನೂ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

ಕಾಂಪೌಂಡ್ ಗೋಡೆಯ ಕೆಳಭಾಗದಲ್ಲಿ ಬಾಡಿಗೆ ಮನೆಗಳಲ್ಲಿ 4 ಕುಟುಂಬಗಳು ವಾಸಿಸುತ್ತಿದ್ದವು. ಎಲ್ಲಾ 4 ಮನೆಗಳ ಹಿಂಭಾಗದ ಗೋಡೆಗಳು ಕುಸಿದು ಬಿದ್ದಿದೆ ಎನ್ನಲಾಗಿದೆ.

error: Content is protected !!
Scroll to Top