(ನ್ಯೂಸ್ ಕಡಬ) newskadaba.com, ಜೂ.13 : ಸ್ಪೇಸ್‌ಎಕ್ಸ್ ಕಂಪನಿ ಷೇರು ಮಾರುಕಟ್ಟೆ ಪ್ರವೇಶಿಸಿದ ಬೆನ್ನಲ್ಲೇ, ಸಂಸ್ಥಾಪಕ ಎಲೋನ್ ಮಸ್ಕ್ ವಿಶ್ವದ ಮೊದಲ ಟ್ರಿಲಿಯನೇರ್ ಆಗಿ ಹೊರಹೊಮ್ಮಿದ್ದಾರೆ.ಮಸ್ಕ್ ಸಂಪತ್ತು ಪ್ರಸ್ತುತ $1.05 ರಿಂದ $1.1 ಟ್ರಿಲಿಯನ್ ತಲುಪಿದೆ (ಸ್ಪೇಸ್‌ಎಕ್ಸ್ ಪಾಲು: $766 ಬಿಲಿಯನ್, ಟೆಸ್ಲಾ: $280 ಬಿಲಿಯನ್).
ಸ್ಪೇಸ್‌ಎಕ್ಸ್ ತನ್ನ ಐಪಿಒ ಮೂಲಕ $75 ಬಿಲಿಯನ್ ಬಂಡವಾಳ ಸಂಗ್ರಹಿಸಿ, ಸೌದಿ ಅರಾಮ್ಕೋ ದಾಖಲೆ ಮುರಿದಿದೆ. ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯ ಈಗ $2 ಟ್ರಿಲಿಯನ್ ದಾಟಿದೆ.ಕಂಪನಿಯ ಶೇರು ಮೌಲ್ಯ ಭಾರಿ ಏರಿಕೆ ಕಂಡಿದ್ದರಿಂದ, ಆರಂಭದಿಂದ ದುಡಿಯುತ್ತಿದ್ದ 4,400ಕ್ಕೂ ಹೆಚ್ಚು ಉದ್ಯೋಗಿಗಳು ರಾತ್ರೋರಾತ್ರಿ ಕೋಟ್ಯಧಿಪತಿಗಳಾಗಿದ್ದಾರೆ.
ಈ ಬಂಡವಾಳವನ್ನು ಮಸ್ಕ್ ಅವರ ಕನಸಿನ ಮಂಗಳ ಗ್ರಹ ಯೋಜನೆ (ಸ್ಟಾರ್‌ಶಿಪ್), ಸ್ಟಾರ್‌ಲಿಂಕ್ ಇಂಟರ್ನೆಟ್ ಹಾಗೂ xAI ತಂತ್ರಜ್ಞಾನಕ್ಕೆ ಬಳಸಲಾಗುತ್ತದೆ.ಮಸ್ಕ್ ಅವರ ಸಂಪತ್ತು ಈಗ ಐರ್ಲೆಂಡ್ ಮತ್ತು ಸ್ವೀಡನ್‌ನಂತಹ ದೇಶಗಳ ವಾರ್ಷಿಕ ಜಿಡಿಪಿಗಿಂತಲೂ ಹೆಚ್ಚಾಗಿದೆ!









