ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಸಿಟಿ ಬಸ್ ಸಂಚಾರ ಆರಂಭ



(ನ್ಯೂಸ್‌ ಕಡಬ) newskadaba.com,  ಜೂ.13 : ಮಂಗಳೂರು ಜಂಕ್ಷನ್ (ಪಡೀಲ್) ರೈಲು ನಿಲ್ದಾಣದಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ನಗರ ಬಸ್ ಸೇವೆಗಳನ್ನು ಆರಂಭಿಸಿದೆ.







ಕಟೀಲು ಮಾರ್ಗ: ಬೆಳಗ್ಗೆ 06:55, 10:45 (ಸುರತ್ಕಲ್, ಕಾಟಿಪಳ್ಳ ಮಾರ್ಗ).ಬೊಕ್ಕಪಟ್ಣ ಮಾರ್ಗ: ಬೆಳಗ್ಗೆ 08:45 ರಿಂದ ಸಂಜೆ 06:30 ರವರೆಗೆ ಒಟ್ಟು 7 ಟ್ರಿಪ್‌ಗಳು (ಕಂಕನಾಡಿ, ಲಾಲ್‌ಬಾಗ್ ಮಾರ್ಗ).






ಸ್ಟೇಟ್ ಬ್ಯಾಂಕ್ ಮಾರ್ಗ: ಮಧ್ಯಾಹ್ನ 01:00 ರಿಂದ ಸಂಜೆ 05:00 ರವರೆಗೆ ಒಟ್ಟು 5 ಟ್ರಿಪ್‌ಗಳು (ನಂತೂರು, ಕದ್ರಿ ಮಾರ್ಗ).ಕೊಡಿಕಲ್ ಮಾರ್ಗ: ಬೆಳಗ್ಗೆ 08:00 ರಿಂದ ಮಧ್ಯಾಹ್ನ 03:30 ರವರೆಗೆ ಒಟ್ಟು 7 ಟ್ರಿಪ್‌ಗಳು (ಮಲ್ಲಿಕಟ್ಟೆ, ಕೊಟ್ಟಾರ ಮಾರ್ಗ).

ರೈಲ್ವೆ ಪ್ರಯಾಣಿಕರು ಆಟೋ/ಟ್ಯಾಕ್ಸಿ ಅವಲಂಬನೆ ತಪ್ಪಿಸಲು ಮತ್ತು ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕೋರಿದ್ದಾರೆ.

error: Content is protected !!
Scroll to Top