ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಆಸ್ಟ್ರೇಲಿಯಾಕ್ಕೆ ಪ್ರಧಾನಿ ಮೋದಿ ಭೇಟಿ: ಮೆಲ್ಬೋರ್ನ್‌ನಲ್ಲಿ ಅನಿವಾಸಿ ಭಾರತೀಯರಿಂದ ಭವ್ಯ ಸಾಂಪ್ರದಾಯಿಕ ಸ್ವಾಗತ – News Kadaba

ಆಸ್ಟ್ರೇಲಿಯಾಕ್ಕೆ ಪ್ರಧಾನಿ ಮೋದಿ ಭೇಟಿ: ಮೆಲ್ಬೋರ್ನ್‌ನಲ್ಲಿ ಅನಿವಾಸಿ ಭಾರತೀಯರಿಂದ ಭವ್ಯ ಸಾಂಪ್ರದಾಯಿಕ ಸ್ವಾಗತ

(ನ್ಯೂಸ್‌ ಕಡಬ) newskadaba.com ಜು. 09: ಮೂರು ರಾಷ್ಟ್ರಗಳ ಪ್ರವಾಸದ ಎರಡನೇ ಹಂತವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೂರು ದಿನಗಳ ಅಧಿಕೃತ ಭೇಟಿಗಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್‌ಗೆ ಆಗಮಿಸಿದ್ದು, ಅಲ್ಲಿನ ಅನಿವಾಸಿ ಭಾರತೀಯ ಸಮುದಾಯದಿಂದ ಅಭೂತಪೂರ್ವ ಸಾಂಪ್ರದಾಯಿಕ ಸ್ವಾಗತ ಲಭಿಸಿದೆ.

ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ನೂರಾರು ಅನಿವಾಸಿ ಭಾರತೀಯರು ತ್ರಿವರ್ಣ ಧ್ವಜ ಹಾರಿಸಿ, ‘ಭಾರತ್ ಮಾತಾ ಕೀ ಜೈ’ ಮತ್ತು ‘ಮೋದಿ, ಮೋದಿ’ ಘೋಷಣೆಗಳೊಂದಿಗೆ ಆತ್ಮೀಯವಾಗಿ ಬರಮಾಡಿಕೊಂಡರು. ‘ಆಸ್ಟ್ರೇಲಿಯನ್ ಇಂಡಿಯನ್ ಆರ್ಕೆಸ್ಟ್ರಾ’ ತಂಡವು ಪ್ರಸ್ತುತಪಡಿಸಿದ ‘ವಂದೇ ಮಾತರಂ’ ದೇಶಭಕ್ತಿ ಗೀತೆಯ ನಾದ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ನೃತ್ಯಗಳು ಸ್ವಾಗತ ಸಮಾರಂಭದ ಮೆರುಗನ್ನು ಹೆಚ್ಚಿಸಿದವು.

ಈ ಮೂರು ದಿನಗಳ ಅಧಿಕೃತ ಭೇಟಿಯಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆ, ವ್ಯಾಪಾರ, ಹೂಡಿಕೆ, ರಕ್ಷಣಾ ಸಹಕಾರ, ತಂತ್ರಜ್ಞಾನ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ ಸಹಭಾಗಿತ್ವ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಉನ್ನತ ಮಟ್ಟದ ಚರ್ಚೆಗಳು ನಡೆಯಲಿವೆ.

Scroll to Top