ಇವಿ ಕಾರುಗಳಿಗೆ ಜೀವಿತಾವಧಿ ತೆರಿಗೆ ಕಡ್ಡಾಯ: 2-ವೀಲರ್ ಗ್ರಾಹಕರು ನಿರಾಳ!



(ನ್ಯೂಸ್ ಕಡಬ) newskadaba.com,  ಜೂ.08  : ಕರ್ನಾಟಕ ಸರ್ಕಾರವು 10 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ ಎಲೆಕ್ಟ್ರಿಕ್ ನಾಲ್ಕು ಚಕ್ರದ ವಾಹನಗಳ ಮೇಲಿನ ಜೀವಿತಾವಧಿ ತೆರಿಗೆ ವಿನಾಯಿತಿಯನ್ನು ಹಿಂಪಡೆದಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಯಾವುದೇ ತೆರಿಗೆ ಇರುವುದಿಲ್ಲ, ಮುಂಚಿನಂತೆಯೇ ವಿನಾಯಿತಿ ಮುಂದುವರಿಯಲಿದೆ..







ಭಾರತದಲ್ಲೇ ಇವಿ ಮಾರಾಟ ಮತ್ತು ನೋಂದಣಿಯಲ್ಲಿ ಕರ್ನಾಟಕವು ಪ್ರಸ್ತುತ 4ನೇ ಸ್ಥಾನದಲ್ಲಿದೆ.ನಾಲ್ಕು ಚಕ್ರದ ಎಲೆಕ್ಟ್ರಿಕ್ ವಾಹನಗಳ ಮೌಲ್ಯದ ಆಧಾರದ ಮೇಲೆ ತೆರಿಗೆಯನ್ನು ನಿಗದಿಪಡಿಸಲಾಗಿದೆ






ವಾಹನದ ಮೌಲ್ಯ (ರೂ.ಗಳಲ್ಲಿ) ಜೀವಿತಾವಧಿ ತೆರಿಗೆ
10 ಲಕ್ಷದವರೆಗೆ 5%
10 ಲಕ್ಷದಿಂದ 25 ಲಕ್ಷದವರೆಗೆ 8%
25 ಲಕ್ಷಕ್ಕಿಂತ ಹೆಚ್ಚು 10%

2016 ರಿಂದ ಇವಿ ವಾಹನಗಳಿಗೆ ನೀಡಲಾಗುತ್ತಿದ್ದ ಸಂಪೂರ್ಣ ತೆರಿಗೆ ವಿನಾಯಿತಿಯನ್ನು ಈಗ ಹಂತ ಹಂತವಾಗಿ ಹಿಂಪಡೆಯಲಾಗುತ್ತಿದ್ದು, ಇದು ಮಧ್ಯಮ ಮತ್ತು ಪ್ರೀಮಿಯಂ ಇವಿ ಕಾರು ಖರೀದಿದಾರರಿಗೆ ಕೊಂಚ ಹೊರೆಯಾಗಲಿದೆ.

error: Content is protected !!
Scroll to Top